×
Ad

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರೋನ್‌ ಗೆ ಕಪಾಳಮೋಕ್ಷ ಮಾಡಿದ ಯುವಕ: ವೀಡಿಯೊ ವೈರಲ್‌

Update: 2021-06-08 20:52 IST

ಪ್ಯಾರಿಸ್:‌ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರೋನ್‌ ಗೆ ಸಾರ್ವಜನಿಕವಾಗಿ ವ್ಯಕ್ತಿಯೊಬ್ಬ ಕಪಾಳಕ್ಕೆ ಹೊಡೆದ ಘಟನೆ ನಡೆದಿದೆ. ಈ ಕುರತ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. 

ವೀಡಿಯೋದಲ್ಲಿ ಸಾರ್ವಜನಿಕರಿಗೆ ಶುಭಾಶಯ ಹೇಳಲು ಮ್ಯಾಕ್ರೋನ್‌ ಜನರ ಬಳಿ ತೆರಳಿದಾಗ ವ್ಯಕ್ತಿಯೋರ್ವ ಕಪಾಳಕ್ಕೆ ಬಾರಿಸುವ ದೃಶ್ಯವು ಸೆರೆಯಾಗಿದೆ. ʼಡೌನ್‌ ವಿತ್‌ ಮ್ಯಾಕ್ರೋನಿಸಮ್‌ʼ ಎಂಬ ಘೋಷಣೆಗಳು ಹಿಂದಿನಿಂದ ಜನರು ಕೂಗುತ್ತಿರುವುದು ವೀಡಿಯೋದಲ್ಲಿದೆ. 

ಫ್ರಾನ್ಸ್‌ ನ ಡ್ರೋಮ್‌ನ ಆಗ್ನೇಯ ಇಲಾಖೆಗೆ ಅಧ್ಯಕ್ಷರು ಭೇಟಿ ನೀಡಿದ ಸಂದರ್ಭ ಈ ಘಟನೆ ನಡೆದಿದೆ. ಕೂಡಲೇ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಭಾಯಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News