ಕೋವಿಡ್ ಸೋಂಕಿತರಿಗೆ ಲಸಿಕೆ ನೀಡುವ ಅಗತ್ಯವಿಲ್ಲ: ಪ್ರಧಾನಿ ಮೋದಿಗೆ ಆರೋಗ್ಯ ತಜ್ಞರ ಸಲಹೆ

Update: 2021-06-10 18:18 GMT

ಹೊಸದಿಲ್ಲಿ:ಈಗಾಗಲೇ  ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವ ಜನರಿಗೆ ಲಸಿಕೆ ನೀಡುವ ಅಗತ್ಯವಿಲ್ಲ ಎಂದು ಸಾರ್ವಜನಿಕ ಆರೋಗ್ಯ ತಜ್ಞರ ಗುಂಪು ಜೂನ್ 6 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ ವರದಿಯಲ್ಲಿ ಸಲಹೆ ನೀಡಿದೆ.

ಸಾಮೂಹಿಕ, ವಿವೇಚನೆಯಿಲ್ಲದ ಹಾಗೂ  ಅಪೂರ್ಣವಾದ ವ್ಯಾಕ್ಸಿನೇಷನ್ ರೂಪಾಂತರಿತ ತಳಿಗಳ ಹೊರಹೊಮ್ಮುವಿಕೆಯನ್ನು ಪ್ರಚೋದಿಸುತ್ತದೆ ಎಂದು ಏಮ್ಸ್ ನ ವೈದ್ಯರು ಹಾಗೂ ಕೋವಿಡ್ -19 ರ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರು ಸೇರಿದಂತೆ ಸಾರ್ವಜನಿಕ ಆರೋಗ್ಯ ತಜ್ಞರ ಸಮೂಹ ಹೇಳಿದೆ.

ತಮ್ಮ ಇತ್ತೀಚಿನ ವರದಿಯಲ್ಲಿ, ಭಾರತೀಯ ಸಾರ್ವಜನಿಕ ಆರೋಗ್ಯ ಸಂಘ (ಐಪಿಎಚ್‌ಎ), ಇಂಡಿಯನ್ ಅಸೋಸಿಯೇಷನ್ ​​ಆಫ್ ಪ್ರಿವೆಂಟಿವ್ ಆ್ಯಂಡ್ ಸೋಶಿಯಲ್ ಮೆಡಿಸಿನ್ (ಐಎಪಿಎಸ್ಎಂ) ಹಾಗೂ  ಇಂಡಿಯನ್ ಅಸೋಸಿಯೇಷನ್ ​​ಆಫ್ ಎಪಿಡೆಮಿಯಾಲಜಿಸ್ಟ್ಸ್ (ಐಎಇ) ತಜ್ಞರು,  ಮಕ್ಕಳನ್ನು ಒಳಗೊಂಡಂತೆ ವ್ಯಾಪಕ ಚುಚ್ಚುಮದ್ದಿನ ಬದಲು ದುರ್ಬಲ ಹಾಗೂ  ಅಪಾಯದಲ್ಲಿರುವವರಿಗೆ ಲಸಿಕೆ ಹಾಕುವುದು ಸದ್ಯದ ಗುರಿಯಾಗಿರಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News