“ಅವರು ನನ್ನೊಂದಿಗಲ್ಲ ಸಚಿನ್ ತೆಂಡುಲ್ಕರ್ ರೊಂದಿಗೆ ಮಾತನಾಡಿರಬಹುದು": ಬಿಜೆಪಿ ನಾಯಕಿ ಹೇಳಿಕೆಗೆ ಸಚಿನ್ ಪೈಲಟ್ ಉತ್ತರ

Update: 2021-06-11 09:28 GMT

ಜೈಪುರ: ಮಾಜಿ ಸಹೋದ್ಯೋಗಿ ಜಿತಿನ್ ಪ್ರಸಾದ್ ಅವರು ಬಿಜೆಪಿಗೆ ಪಕ್ಷಾಂತರವಾದ ನಂತರ ಸಚಿನ್ ಪೈಲಟ್ ಈಗ ಚರ್ಚೆಯಲ್ಲಿದ್ದಾರೆ. ಪಕ್ಷಾಂತರವಾಗುವ  ಮುಂದಿನ ಸರದಿಯಲ್ಲಿ ತಾನಿದ್ದೇನೆ ಎಂಬ ಬಿಜೆಪಿ ಮುಖಂಡರ ಅಭಿಪ್ರಾಯವನ್ನು ಇಂದು ಸಚಿನ್ ಪೈಲಟ್  ಖಂಡಿಸಿದ್ದಾರೆ.

ಸಚಿನ್ ಪೈಲಟ್ ಅವರೊಂದಿಗೆ ಮಾತನಾಡಿದ್ದೇನೆ ಹಾಗೂ ಅವರು ಶೀಘ್ರದಲ್ಲೇ ಬಿಜೆಪಿಗೆ ಸೇರುತ್ತಾರೆ ಎಂದು ಬಿಜೆಪಿಗೆ ಸೇರುವ ಮೊದಲು 25 ವರ್ಷಗಳ ಕಾಲ ಕಾಂಗ್ರೆಸ್ ಮುಖಂಡರಾಗಿದ್ದ ರೀಟಾ ಬಹುಗುಣ ಜೋಶಿ ಅವರು ಹೇಳಿದ್ದಾರೆ.

"ರೀಟಾ ಬಹುಗುಣ ಜೋಶಿ ಅವರು ಸಚಿನ್ ಅವರೊಂದಿಗೆ ಮಾತನಾಡಿದ್ದೇನೆ ಎಂದು  ಹೇಳಿದ್ದಾರೆ. ಅವರು ಸಚಿನ್ ತೆಂಡುಲ್ಕರ್ ಅವರೊಂದಿಗೆ ಮಾತನಾಡಿದ್ದಿರಬಹುದು. ನನ್ನೊಂದಿಗೆ ಮಾತನಾಡಲು ಅವರಿಗೆ ಧೈರ್ಯವಿಲ್ಲ" ಎಂದು ಪೈಲಟ್ ಸುದ್ದಿಗಾರರಿಗೆ ತಿಳಿಸಿದರು.

ಬುಧವಾರ ಕಾಂಗ್ರೆಸ್ ತೊರೆದಿದ್ದ ಜಿತಿನ್ ಪ್ರಸಾದ ಅವರು ಇಂದು ದೇಶದ "ಏಕೈಕ ರಾಷ್ಟ್ರೀಯ ಪಕ್ಷ" ಎಂದರೆ ಬಿಜೆಪಿ ಮಾತ್ರ ಎಂದು  ಬಣ್ಣಿಸಿದ್ದಾರೆ.

ಕಳೆದ ವರ್ಷ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ಬಂಡಾಯ ಎದ್ದ ಬಳಿಕ  ಸೋನಿಯಾ ಗಾಂಧಿ ಹಾಗೂ  ರಾಹುಲ್ ಗಾಂಧಿ ಅವರ ಮನವೊಲಿಸಿದ್ದರು. ಆದಾಗ್ಯೂ  ಪೈಲಟ್ ಅವರ ಕಾಂಗ್ರೆಸ್ ನಿಂದ ನಿರ್ಗಮಿಸಲಿದ್ದಾರೆ ಎಂಬ ಬಗ್ಗೆ ಊಹಾಪೋಹಗಳು ಮುಂದುವರೆದಿದೆ.

ಮಾಜಿ ಉಪಮುಖ್ಯಮಂತ್ರಿ ಪೈಲಟ್  ರಾಜಸ್ಥಾನ ಸರಕಾರ ಹಾಗೂ  ಪಕ್ಷದ ಸಂಘಟನೆಯಲ್ಲಿ ಹೆಚ್ಚಿನ ಪಾಲನ್ನು ಬಯಸುತ್ತಾರೆ. ಆದರೆ ಅಶೋಕ್ ಗೆಹ್ಲೋಟ್ ಇದುವರೆಗೆ ಇಂತಹ ಕ್ರಮಗಳನ್ನು ವಿರೋಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News