ಭಾರತದಲ್ಲಿ 90 ಸಾವಿರದೊಳಗೆ ಇಳಿದ ದೈನಂದಿನ ಕೊರೋನ ಕೇಸ್ ಗಳು

Update: 2021-06-12 05:20 GMT

ಹೊಸದಿಲ್ಲಿ: ಕಳೆದ 24 ಗಂಟೆಗಳಲ್ಲಿ 84,332 ಹೊಸ ಸೋಂಕುಗಳು ದಾಖಲಾದ ನಂತರ ಭಾರತದ ಕೋವಿಡ್ -19 ಒಟ್ಟು ಕೇಸ್ ಗಳ ಸಂಖ್ಯೆ 29,359,155 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ.

ಎರಡು ತಿಂಗಳಿಗಿಂತ ಹೆಚ್ಚು ಸಮಯದ ಬಳಿಕ ಮೊದಲ ಬಾರಿ ದೈನಂದಿನ ಪ್ರಕರಣಗಳು 90,000 ಕ್ಕಿಂತ ಕಡಿಮೆಯಾಗಿದೆ. ಶುಕ್ರವಾರ ದೇಶಾದ್ಯಂತ 91,702 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು ಸಹ 10.80 ಲಕ್ಷಕ್ಕೆ ಇಳಿದಿವೆ. 4,002 ಜನರು ವೈರಲ್ ಕಾಯಿಲೆಗೆ ಬಲಿಯಾಗಿದ್ದಾರೆ ಹಾಗೂ  1,21,311 ಜನರು ಶನಿವಾರ ಚೇತರಿಸಿಕೊಂಡರು, ಸಾವಿನ ಸಂಖ್ಯೆ ಹಾಗೂ  ಚೇತರಿಕೆ ಪ್ರಮಾಣ ಕ್ರಮವಾಗಿ 3,67,081 ಹಾಗೂ  27,911,384 ಕ್ಕೆ ತಲುಪಿದೆ. ಮೇ 7 ರಂದು ಅತಿ ಹೆಚ್ಚು ಕೊರೋನ ಪ್ರಕರಣ ವರದಿಯಾದ ನಂತರ ದೈನಂದಿನ ಪ್ರಕರಣಗಳಲ್ಲಿ 8ಶೇ. ಕುಸಿತ ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News