ಟೆಸ್ಟ್ ಮ್ಯಾಚ್ : ವಿಂಡೀಸ್‌ಗೆ ಇನಿಂಗ್ಸ್ ಸೋಲು

Update: 2021-06-13 04:42 GMT
ಫೋಟೊ  (Twitter/windiescricket)

ಸೆಂಟ್ ಲೂಸಿಯಾ : ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಡಾ ಅವರ ಮಾರಕ ದಾಳಿಯಿಂದಾಗಿ ವೆಸ್ಟ್‌ ಇಂಡೀಸ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 63 ರನ್‌ಗಳ ಭಾರಿ ಅಂತರದಿಂದ ಸೋತಿದೆ.

ಸೆಂಟ್ ಲೂಸಿಯಾದಲ್ಲಿ ನಡೆದ ಪಂದ್ಯವು ಮೂರನೇ ದಿನ ಭೋಜನ ವಿರಾಮಕ್ಕೆ ಮುನ್ನವೇ ವೆಸ್ಟ್ ಇಂಡೀಸ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 162 ರನ್‌ಗಳಿಗೆ ಮುಗ್ಗರಿಸಿತು.

ಪ್ರವಾಸಿ ದಕ್ಷಿಣ ಆಫ್ರಿಕಾದ 322 ರನ್‌ಗಳಿಗೆ ಪ್ರತಿಯಾಗಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 97 ರನ್‌ಗಳಿಗೆ ಆಲೌಟ್ ಆಗಿದ್ದ ವೆಸ್ಟ್‌ ಇಂಡೀಸ್ ಫಾಲೊ ಅನ್ ಅನುಭವಿಸಿ ಎರಡನೇ ಇನಿಂಗ್ಸ್‌ನಲ್ಲೂ ಅಗ್ಗದ ಮೊತ್ತಕ್ಕೆ ಕುಸಿಯಿತು. ಪ್ರವಾಸಿ ತಂಡದ ವೇಗದ ಬೌಲರ್‌ಗಳು ಅನಿಯತ ಬೌನ್ಸ್ ಮತ್ತು ಸಾಕಷ್ಟು ಸೀಮ್ ಹೊಂದಿದ್ದ ಪಿಚ್‌ನ ಸಂಪೂರ್ಣ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾದರು.

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಾಸ್ಟನ್ ಚೇಸ್ ಕೇಶವ್ ಮಹರಾಜ್ ಅವರ ಸ್ಪಿನ್ ಮೋಡಿಗೆ ಔಟ್ ಆಗುವ ಮುನ್ನ ಇಡೀ ತಂಡದಲ್ಲೇ ಗರಿಷ್ಠ (62) ರನ್ ಗಳಿಸಿದರು. ಇಡೀ ಇನಿಂಗ್ಸ್‌ನಲ್ಲಿ ಇತರ ಯಾರೂ 14ಕ್ಕಿಂತ ಅಧಿಕ ರನ್ ಗಳಿಸಲಿಲ್ಲ. ರಬಡಾ 34 ರನ್‌ಗೆ 5 ವಿಕೆಟ್ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಸಹ ವೇಗದ ಬೌಲರ್ ಲುಂಗಿ ನಿದಿ 19 ರನ್‌ಗಳಿಗೆ ಐದು ವಿಕೆಟ್ ಕಬಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News