×
Ad

ಮುಂಬೈ:ಜನರ ಕಣ್ಮುಂದೆಯೇ ಬಾವಿಯೊಳಗೆ ಬಿದ್ದ ಪಾರ್ಕ್‌ ಮಾಡಿದ್ದ ಕಾರು;ವೀಡಿಯೊ ವೈರಲ್‌

Update: 2021-06-13 20:27 IST
photo: India Today 

ಮುಂಬೈ: ಮಹಾನಗರದ  ಘಾಟ್‌ಕೋಪರ್‌ನ ಹೌಸಿಂಗ್ ಸೊಸೈಟಿಯಲ್ಲಿ ರವಿವಾರ ನಿಲ್ಲಿಸಿದ್ದ ಕಾರೊಂದು  ಮುಚ್ಚಿದ್ದ ಬಾವಿಯೊಳಗೆ ಬಿದ್ದಿದೆ.

 ವೈರಲ್ ಆಗಿರುವ ವೀಡಿಯೊವನ್ನು ವಾಹನ ಮಾಲೀಕರು ಸೆರೆ ಹಿಡಿದಿದ್ದಾರೆ. ಕಾಂಕ್ರೀಟ್ ಪಾರ್ಕಿಂಗ್ ಪ್ರದೇಶದ ಒಂದು ಭಾಗದಲ್ಲಿ ಹೊಂಡ ಕಾಣಿಸಿಕೊಂಡಿದ್ದು, ಈ ಹೊಂಡವು  ಕಾರನ್ನು ನುಂಗುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ.

ಘಾಟ್‌ಕೋಪರ್‌ನ ರಾಮ್ ನಿವಾಸ್ ಸೊಸೈಟಿಯ ಆವರಣದಲ್ಲಿ ರವಿವಾರ ಈ ಘಟನೆ ನಡೆದಿದೆ. ಕಾಂಪೌಂಡ್ ಒಳಗೆ 50 ಅಡಿ ಆಳದ  ಬಾವಿ ಇದೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಸುಮಾರು 100 ವರ್ಷಗಳಷ್ಟು ಹಳೆಯದಾದ ಈ ಬಾವಿಯನ್ನು ಸೊಸೈಟಿ ನಿವಾಸಿಗಳಿಗೆ ಪಾರ್ಕಿಂಗ್ ಸ್ಥಳವನ್ನು ಕಲ್ಪಿಸುವ ಸಲುವಾಗಿ ಕಾಂಕ್ರೀಟ್ ಬಳಸಿ ಮುಚ್ಚಲಾಗಿತ್ತು.

 ಈ ವಾರದ ಆರಂಭದಲ್ಲಿ ಮುಂಬೈನಲ್ಲಿ ಸುರಿದ  ಭಾರಿ ಮಳೆಗೆ  ಬಾವಿಯನ್ನು ಮುಚ್ಚಿದ್ದ ಕಾಂಕ್ರೀಟ್ ಕೊಚ್ಚಿಹೋಗಿತ್ತು.

ಘಟನೆಯ ಬಗ್ಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳನ್ನು  ಎಚ್ಚರಿಸಲಾಗಿದ್ದು, ಅಧಿಕಾರಿಗಳು ಈಗ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಪಂಪಿಂಗ್ ಯಂತ್ರಗಳನ್ನು ಬಳಸಿ ಸಿಂಕ್‌ಹೋಲ್ ಅನ್ನು ಬರಿದು ಮಾಡಿದ ನಂತರ, ಬಾವಿಗೆ ಬಿದ್ದ ಕಾರನ್ನು ಹೊರತೆಗೆಯಲು ಕ್ರೇನ್ ಅನ್ನು ಬಳಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News