ತಿರುಚ್ಚಿ: ರಾಸಾಯನಿಕ ಬಳಸಿ ಹಣ್ಣು ಮಾಡಲಾದ 4 ಟನ್ ಮಾವುಗಳನ್ನು ವಶಪಡಿಸಿದ ಅಧಿಕಾರಿಗಳು

Update: 2021-06-13 18:15 GMT
ಸಾಂದರ್ಭಿಕ ಚಿತ್ರ 

ಚೆನ್ನೈ, ಜೂ. 13: ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಗಾಂಧಿ ಮಾರುಕಟ್ಟೆಯಿಂದ ರಾಸಾಯನಿಕ ಸಿಂಪಡಿಸಿ ಕೃತಕವಾಗಿ ಹಣ್ಣು ಮಾಡಿಲಾದ 4,000 ಕಿ.ಗ್ರಾಂ. ಮಾವಿನ ಹಣ್ಣನ್ನು ಶನಿವಾರ ಆಹಾರ ಸುರಕ್ಷೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಅಧಿಕಾರಿಗಳು ಅನಂತರ ಅದನ್ನು ನಾಶ ಮಾಡಿದ್ದಾರೆ. ಮಾವುಗಳನ್ನು ಹಣ್ಣು ಮಾಡುತ್ತಿರುವ ಬಗ್ಗೆ ಮಾಹಿತಿ ಸ್ವೀಕರಿಸಿದ ಬಳಿಕ ತಿರುಚಿಯ ಗಾಂಧಿ ಮಾರುಕಟ್ಟೆಯಲ್ಲಿರುವ 10 ಗೋದಾಮುಗಳಿಗೆ ಜಿಲ್ಲೆಯ ಆಹಾರ ಸುರಕ್ಷಾ ಇಲಾಖೆ ಅಧಿಕಾರಿ ಆರ್. ರಮೇಶ್ ಬಾಬು ಅವರ ನೇತೃತ್ವದಲ್ಲಿ ತಂಡ ದಾಳಿ ನಡೆಸಿತು. ಮಾವಿನ ಕಾಯಿಗಳನ್ನು ಕೃತಕವಾಗಿ ಹಣ್ಣು ಮಾಡಲು ಕನಿಷ್ಠ ಮೂರು ಗೋದಾಮುಗಳಲ್ಲಿ ಎಥಿಲಿನ್ ಬಳಸುತ್ತಿರುವುದನ್ನು ಮಾಧ್ಯಮ ವರದಿ ಮಾಡಿದೆ. 

ಮಾವಿನ ಕಾಯಿಗಳನ್ನು ರಾಸಾಯನಿಕ ಬಳಸಿ ಹಣ್ಣು ಮಾಡಬಾರದು. ಇಂತಹ ವಿಚಾರಗಳು ಬೆಳಕಿಗೆ ಬಂದರೆ ಆರೋಪಿಗಳ ವಿರುದ್ಧ ಆಹಾರ ಸುರಕ್ಷಾ ಹಾಗೂ ಗುಣಮಟ್ಟದ ಕಾಯ್ದೆ-2006ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News