ಬಿಜೆಪಿ ಸೇರಿದ್ದ ಟಿಎಂಸಿ ಸಂಸದ ಸುನೀಲ್ ಮಂಡಲ್ ಪಕ್ಷಕ್ಕೆ ವಾಪಸ್ ಸಾಧ್ಯತೆ

Update: 2021-06-15 17:54 GMT
photo: India Tv

 ಕೋಲ್ಕತಾ: ಮುಕುಲ್ ರಾಯ್ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಗೆ ಮರಳಿದ ಕೆಲವು ದಿನಗಳ ನಂತರ ಟಿಎಂಸಿಯ ಬಂಡಾಯ ಸಂಸದ ಸುನೀಲ್ ಮಂಡಲ್ ಮಂಗಳವಾರ ಭಾರತೀಯ ಜನತಾ ಪಕ್ಷದ ವಿರುದ್ಧ ಮಾತನಾಡಿದ್ದಾರೆ.ಈ ಮೂಲಕ ಘರ್ ವಾಪ್ಸಿಆಗುವ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ.

"ನಮ್ಮಲ್ಲಿ ಅನೇಕರ ಬಗ್ಗೆ ಬಿಜೆಪಿಗೆ ನಂಬಿಕೆಯ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ನಮಗೆ ಇಲ್ಲಿ ಸಾಕಷ್ಟು ಅವಕಾಶ ಸಿಗುತ್ತಿಲ್ಲ. ಟಿಎಂಸಿಯಿಂದ ಬಂದವರನ್ನು ಬಿಜೆಪಿ ಸಹಿಸಲಾರದು ಎಂದು ತೋರುತ್ತದೆ ಎಂದು ಮಂಡಲ್ ಅಸಮಾಧಾನ ಹೊರಹಾಕಿದರು.

ವಿಪರ್ಯಾಸವೆಂದರೆ, ಚುನಾವಣೆಗೆ ಮುಂಚಿತವಾಗಿ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಂಡಲ್  ಅವರು ಹಲವಾರು ಟಿಎಂಸಿ ನಾಯಕರೊಂದಿಗೆ ಬಿಜೆಪಿ ಪಾಳಯ ಸೇರಿಕೊಂಡಿದ್ದರು.

“ಸುವೇಂದು  ಅವರು ನನಗೆ ನೀಡಿದ ಒಂದು ಮಾತನ್ನೂ ಉಳಿಸಿಕೊಂಡಿಲ್ಲ. ಹಾಗಾಗಿ ಅವರ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ, ”ಎಂದು ಅವರು ಹೇಳಿದರು.

"ಹೊರಗಿನಿಂದ ಬಂದವರಿಗೆ ಬಂಗಾಳದ ಜನರ ಮನಸ್ಸನ್ನು ಗೆಲ್ಲುವುದು ಸಾಧ್ಯ ಎಂದು ನೀವು ಭಾವಿಸುತ್ತೀರಾ?  ಎಂದು ಪ್ರಶ್ನಿಸಿದ ಮಂಡಲ್ " ಬಿಜೆಪಿ ಕೇಂದ್ರ ನಾಯಕತ್ವವನ್ನು "ಹೊರಗಿನವರು" ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News