ಕೇರಳ:ದೀರ್ಘ ರಜೆ ಮೇಲೆ ತೆರಳಿದ್ದ 28 ವೈದ್ಯರ ಸೇವೆ ರದ್ದು

Update: 2021-06-20 17:31 GMT

ತಿರುವನಂತಪುರ: ಸೇವೆಯಿಂದ ಅನಧಿಕೃತ ಅನುಪಸ್ಥಿತಿಯಲ್ಲಿದ್ದ 28 ವೈದ್ಯರ ಸೇವೆಗಳನ್ನು ಕೇರಳದ ಆರೋಗ್ಯ ಇಲಾಖೆ ರದ್ದುಪಡಿಸಿದೆ.

ದೀರ್ಘ ರಜೆಯಲ್ಲಿದ್ದ ಇತರರಿಗೆ ಶೀಘ್ರವಾಗಿ ಮತ್ತೆ ಕರ್ತವ್ಯಕ್ಕೆ ಸೇರಲು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮನವಿ ಮಾಡಿದ್ದಾರೆ.

ಸಾಂಕ್ರಾಮಿಕ ರೋಗದ ವಿರುದ್ಧ ರಾಜ್ಯವು ಹೋರಾಟವನ್ನು ಎದುರಿಸುತ್ತಿದೆ ಹಾಗೂ  ಮೂರನೇ ಅಲೆ ಸಂಭವಿಸುವ ವರದಿಗಳಿವೆ ಎಂದು ಅವರು ಹೇಳಿದರು.

ಆದ್ದರಿಂದ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಆರೋಗ್ಯ ಕಾರ್ಯಕರ್ತರ ಅವಶ್ಯಕತೆಯಿದೆ. ದೀರ್ಘ ರಜೆಯಲ್ಲಿರುವವರೆಲ್ಲರೂ ಕೂಡಲೇ ಕರ್ತವ್ಯಕ್ಕೆ ಮರಳಬೇಕು ಎಂದು ಅವರು ಹೇಳಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿದ್ದ 28 ವೈದ್ಯರಿಗೆ ಪದೇ ಪದೇ ನೋಟಿಸ್ ನೀಡಿದ್ದರೂ ಸೇವೆಯಲ್ಲಿ ಮತ್ತೆ ಸೇರಲು ವಿಫಲವಾದ ಕಾರಣ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News