ಪಂಜಾಬ್: ಮೊದಲ ಹಸಿರು ಫಂಗಸ್ ಸೋಂಕು ಪತ್ತೆ

Update: 2021-06-20 18:40 GMT

ಜಲಂದರ್: ಪಂಜಾಬ್ ನಲ್ಲಿ ಮೊದಲ ಬಾರಿಗೆ ಜಲಂಧರ್ ನಲ್ಲಿ ಹಸಿರು ಫಂಗಸ್ ಸೋಂಕು ಶನಿವಾರ ವರದಿಯಾಗಿದೆ. ಮಧ್ಯಪ್ರದೇಶದ ಬಳಿಕ ಹಸಿರು ಫಂಗಸ್ ಸೋಂಕು ವರದಿಯಾಗುತ್ತಿರುವ ಎರಡನೇ ರಾಜ್ಯ ಇದಾಗಿದೆ.

ಪಂಜಾಬ್ ನಲ್ಲಿ ವರದಿಯಾಗುತ್ತಿರುವ ಮೊದಲ ದೃಢೀಕೃತ ಹಸಿರು ಫಂಗಸ್ ಸೋಂಕು ಇದಾಗಿದೆ ಎಂದು ಇಲ್ಲಿನ ಸಿವಿಲ್ ಆಸ್ಪತ್ರೆಯ ಜಿಲ್ಲಾ ಸಾಂಕ್ರಾಮಿಕ ರೋಗ ತಜ್ಞ ಡಾ. ಪರಮವೀರ್ ಸಿಂಗ್ ಅವರು ಹೇಳಿದ್ದಾರೆ.

‘‘60 ವರ್ಷದ ಕೋವಿಡ್ ಸೋಂಕಿತನಲ್ಲಿ ಹಸಿರು ಫಂಗಸ್ ಸೋಂಕು ಪತ್ತೆಯಾಯಿತು. ಅವರನ್ನು ನಿಗಾದಲ್ಲಿ ಇರಿಸಲಾಗಿದೆ. ಈ ಹಿಂದೆ ಇದೇ ಲಕ್ಷಣದ ಸೋಂಕು ವರದಿಯಾಗಿತ್ತು. ಆದರೆ, ಅದು ಹಸಿರು ಫಂಗಸ್ ಸೋಂಕು ಎಂಬುದು ದೃಢಪಟ್ಟಿಲ್ಲ’’ ಎಂದು ಡಾ. ಸಿಂಗ್ ಅವರು ಹೇಳಿದ್ದಾರೆ.

ಹಸಿರು ಫಂಗಸ್ ಸೋಂಕು ಪತ್ತೆಯಾದ ವ್ಯಕ್ತಿಯಲ್ಲಿ ಕಪ್ಪು ಫಂಗಸ್ ಸೋಂಕಿನ ಲಕ್ಷಣಗಳೇ ಕಂಡು ಬಂದಿವೆ. ನಾವು ಆತಂಕಪಡುವ ಅಗತ್ಯ ಇಲ್ಲ. ಆದರೆ, ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News