ಜನಪ್ರಿಯ ಒಡಿಯಾ ಹಿನ್ನೆಲೆ ಗಾಯಕಿ ಟಪ್ಪು ಮಿಶ್ರ ಕೋವಿಡ್ ನಂತರದ ಆರೋಗ್ಯ ಸಮಸ್ಯೆಯಿಂದ ನಿಧನ

Update: 2021-06-20 18:48 GMT

ಭುವನೇಶ್ವರ, ಜೂ. 20: ಕೋವಿಡ್ನಿಂದ ಗುಣಮುಖರಾದ ಬಳಿಕದ ಆರೋಗ್ಯ ಸಮಸ್ಯೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನಪ್ರಿಯ ಒಡಿಶಾ ಹಿನ್ನೆಲೆ ಗಾಯಕಿ ಟಪ್ಪು ಮಿಶ್ರ (36) ಶನಿವಾರ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಅವರ ತಂದೆ ಕೂಡ ಕೋವಿಡ್ ಸೋಂಕಿನಿಂದ ಮೇ 10ರಂದು ಮೃತಪಟ್ಟಿದ್ದರು.
   ‌
ಟಪ್ಪು ಮಿಶ್ರ ಅವರು ಅವರ ದೇಹದ ಆಮ್ಲಜನಕದ ಮಟ್ಟ 45ಕ್ಕೆ ಇಳಿದ ಬಳಿಕ ಎರಡು ದಿನಗಳ ಹಿಂದೆ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಅವರ ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟಾಗಿತ್ತು. ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

‘ಕುಲನಂದನ್’ ಒಡಿಯಾ ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ ಅವರು 150ಕ್ಕೂ ಅಧಿಕ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿದ್ದರು. ಅವರು ತನ್ನ ವೃತ್ತಿ ಜೀವನದಲ್ಲಿ ಹಲವು ಭಜನೆಗಳನ್ನು ಕೂಡ ಅವರು ಹಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News