800 ಕೆಜಿ ಸೆಗಣಿ ಕಳವು, ಕಳ್ಳತನ ಪ್ರಕರಣ ದಾಖಲಿಸಿದ ಪೊಲೀಸರು

Update: 2021-06-21 12:15 GMT
ಸಾಂದರ್ಭಿಕ ಚಿತ್ರ (Indian express)

ಕೋರ್ಬಾ: ಛತ್ತೀಸ್ ಗಡದ ಕೋರ್ಬಾ ಜಿಲ್ಲೆಯ ಹಳ್ಳಿಯಿಂದ ಹಸುವಿನ ಸೆಗಣಿ ಕಳ್ಳತನವಾಗಿರುವ ಅಸಾಮಾನ್ಯ ಘಟನೆಯೊಂದು ಬೆಳಕಿಗೆ ಬಂದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಜೂನ್ 8 ಹಾಗೂ ಜೂನ್ 9 ರ ಮಧ್ಯರಾತ್ರಿ ಡಿಪ್ಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಧುರೇನಾ ಗ್ರಾಮದಿಂದ 1,600 ರೂ. ಮೌಲ್ಯದ 800 ಕೆಜಿ ಹಸುವಿನ ಸಗಣಿ ಕಳವು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಗ್ರಾಮ ಗೌತನ್ ಸಮಿತಿಯ ಮುಖ್ಯಸ್ಥ ಕಮ್ಹಾನ್ ಸಿಂಗ್ ಕನ್ವರ್ ಅವರು ಜೂನ್ 15 ರಂದು ಔಪಚಾರಿಕ ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಡಿಪ್ಕಾ ಎಸ್‌ಎಚ್‌ಒ ಹರೀಶ್ ತಾಂಡೇಕರ್ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯ ಸರಕಾರವು ವರ್ಮಿಕಾಂಪೋಸ್ಟ್ ಉತ್ಪಾದಿಸುವ ಮಹತ್ವಾಕಾಂಕ್ಷೆಯ ‘ಗೋಧನ್ ನ್ಯಾಯ ಯೋಜನೆ’ ಎಂಬ ಯೋಜನೆಯಡಿ ಪ್ರತಿ ಕೆ.ಜಿ.ಗೆ 2 ರೂ.ಗೆ ಗೋವಿನ ಸೆಗಣಿ ಸಂಗ್ರಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News