ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಭಾರತ-ನ್ಯೂಝಿಲ್ಯಾಂಡ್ 4ನೇ ದಿನದಾಟ ಮಳೆಗಾಹುತಿ

Update: 2021-06-21 14:24 GMT
photo: twitter

ಸೌತಾಂಪ್ಟನ್,ಜೂ.21: ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಮಳೆ ಮತ್ತೊಮ್ಮೆ ಅಡ್ಡಿಪಡಿಸಿದೆ. ಸೋಮವಾರ  ಪಂದ್ಯದ ನಾಲ್ಕನೇ ದಿನದಾಟವು ಒಂದೂ ಎಸೆತ ಕಾಣದೇ ಮಳೆಗಾಹುತಿಯಾಗಿದೆ.

ಮಳೆ ಹೆಚ್ಚಾದ ಕಾರಣ ಅಂಪೈರ್ ಗಳು 4ನೇ ದಿನದಾಟವನ್ನುರದ್ದುಪಡಿಸಲು ನಿರ್ಧರಿಸಿದರು.

ಈ ಪಂದ್ಯವು ಫಲಿತಾಂಶವಿಲ್ಲದೆ ಅಂತ್ಯಗೊಂಡರೆ ಉಭಯ ತಂಡಗಳು ಪ್ರತಿಷ್ಠಿತ ಟ್ರೋಫಿಯನ್ನು ಹಂಚಿಕೊಳ್ಳಲಿವೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ದಿನದಾಟವು ಮಳೆಯಿಂದಾಗಿ ಆರಂಭವಾಗಿರಲಿಲ್ಲ. ಕಳೆದ ಎರಡು ದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು.

3ನೇ ದಿನದಾಟವಾದ ರವಿವಾರ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ್ದ ನ್ಯೂಝಿಲ್ಯಾಂಡ್ ತಂಡ ಭಾರತವನ್ನು ಮೊದಲ ಇನಿಂಗ್ಸ್ ನಲ್ಲಿ 217 ರನ್ ಗೆ ನಿಯಂತ್ರಿಸಿತ್ತು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಕಿವೀಸ್  3ನೇ ದಿನದಾಟದಂತ್ಯಕ್ಕೆ 49 ಓವರ್ ಗಳಲ್ಲಿ 2 ವಿಕೆಟ್ ಗಳ ನಷ್ಟಕ್ಕೆ 101 ರನ್ ಗಳಿಸಿತ್ತು. ಭಾರತದ ಮೊದಲ ಇನಿಂಗ್ಸ್ ಗಿಂತ 116 ರನ್ ಹಿನ್ನಡೆಯಲ್ಲಿದೆ.

 ಡೆವೊನ್ ಕಾನ್ವೇ ಹಾಗೂ ಟಾಮ್ ಲಥಾಮ್ ಮೊದಲ ವಿಕೆಟ್ ಗೆ 70 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದ್ದರು. ನಾಯಕ ಕೇನ್ ವಿಲಿಯಮ್ಸನ್ ಹಾಗೂ ಹಿರಿಯ ಆಟಗಾರ ರಾಸ್ ಟೇಲರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News