ಮಕ್ಕಳ ಮೇಲೆ ದೌರ್ಜನ್ಯ ವ್ಯಾಪಕ : ವಿಶ್ವಸಂಸ್ಥೆ ಕಳವಳ

Update: 2021-06-22 03:23 GMT

ಜಿನೀವಾ : ಕಳೆದ ವರ್ಷ ವಿಶ್ವದಲ್ಲಿ 19,300ಕ್ಕೂ ಅಧಿಕ ಮಕ್ಕಳು ಗಂಭೀರ ಪ್ರಮಾಣದ ದೌರ್ಜನ್ಯಗಳನ್ನು ಎದುರಿಸಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಕಳೆದ ವರ್ಷ ಶಾಲೆ ಮತ್ತು ಆಸ್ಪತ್ರೆಗಳ ಮೇಲಿನ ದಾಳಿ ಸೇರಿದಂತೆ 26,425 ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ ಎಂದು ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ ಕುರಿತ ಮಹಾಪ್ರಧಾನ ಕಾಯದರ್ಶಿಗಳ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

"ಕಳೆದ ವರ್ಷ 19,300ಕ್ಕೂ ಹೆಚ್ಚು ಮಕ್ಕಳು ಯುದ್ಧದಿಂದ ತೊಂದರೆ ಅನುಭವಿಸಿದ್ದಾರೆ. ಹತ್ಯೆ, ಅಂಗಹೀನಗೊಳಿಸುವುದು ಅಥವಾ ಅತ್ಯಾಚಾರದಂಥ ಗಂಭೀರ ದೌರ್ಜನ್ಯಗಳು ಮಕ್ಕಳ ವಿರುದ್ಧ ನಡೆದಿವೆ ಎಂದು ಸೋಮವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ವಿವರಿಸಲಾಗಿದೆ.

ಬಾಲಕ- ಬಾಲಕಿಯರಿಗೆ ಜೀವಿಸುವ, ಆರೋಗ್ಯ, ಹಿಂಸೆಯಿಂದ ಮುಕ್ತವಾಗುವ ಹಕ್ಕು ಇದೆ. ಅವರನ್ನು ನಾವು ರಕ್ಷಿಸಬೇಕಾಗಿದೆ ಎಂದು ಮಹಾಪ್ರಧಾನ ಕಾಯದರ್ಶಿ ಆಂಟನಿಯೊ ಗುಟ್ರೆಸ್ ಟ್ವೀಟ್ ಮಾಡಿದ್ದಾರೆ.

ಮಕ್ಕಳನ್ನ ಉದ್ಯೋಗಕ್ಕೆ ನೇಮಿಸಿಕೊಳ್ಳುವುದು, ಹತ್ಯೆ, ಅಂಗಹೀನಗೊಳಿಸುವಿಕೆ ಸಾಮಾನ್ಯವಾಗಿ ಕಂಡುಬರುವ ದೌರ್ಜನ್ಯಗಳು. ಇದರ ಜತೆಗೆ ಮಾನವೀಯ ನೆರವನ್ನು ನಿರಾಕರಿಸುವುದು ಮತ್ತು ಅಪಹರಣ ಕೂಡಾ ಸೇರಿದೆ. 2020ರಲ್ಲಿ ಮಕ್ಕಳ ಅಪಹರಣ ಶೇಕಡ 90ರಷ್ಟು ಹೆಚ್ಚಿದೆ. ಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಶೇಕಡ 70ರಷ್ಟು ಹೆಚ್ಚಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News