ಅಸ್ಸಾಂನಲ್ಲಿ ಸಿಎಎ ವಿರೋಧಿ ಪ್ರತಿಭಟನೆ: ಒಂದು ಪ್ರಕರಣದಲ್ಲಿ ಅಖಿಲ್ ಗೊಗೊಯ್ ಖುಲಾಸೆ

Update: 2021-06-22 15:26 GMT
photo: twitter

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ 2019 ರ ಡಿಸೆಂಬರ್‌ನಲ್ಲಿ ಅಸ್ಸಾಂ ರಾಜ್ಯದಲ್ಲಿ ನಡೆದಿದ್ದ  ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ದಾಖಲಾದ ಎರಡು ಪ್ರಕರಣಗಳಲ್ಲಿ ಒಂದರಲ್ಲಿ  ರೈಜೋರ್ ದಳ ಅಧ್ಯಕ್ಷ ಹಾಗೂ  ಅಸ್ಸಾಂ ಶಿವಸಾಗರ ಕ್ಷೇತ್ರದ  ಶಾಸಕ ಅಖಿಲ್ ಗೊಗೊಯ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ..

ಪ್ರಮುಖ ರೈತರ ಕಾರ್ಯಕರ್ತ ಗೊಗೊಯ್ ವಿರುದ್ಧ  ಎನ್‌ಐಎ ಎರಡು ಪ್ರಕರಣಗಳನ್ನು ದಾಖಲಿಸಿದೆ. ಒಂದು ಐಪಿಸಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಕಾಯ್ದೆ (ಯುಎಪಿಎ) ಯ ಹಲವಾರು ವಿಭಾಗಗಳ ಅಡಿಯಲ್ಲಿ ದಿಬ್ರುಗಡದ ಚಾಬುವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೆ, ಇನ್ನೊಂದು ಪ್ರಕರಣವು ಗುವಾಹಟಿಯ ಚಾಂದಮರಿಯಲ್ಲಿ ದಾಖಲಾಗಿದೆ. ಚಾಬುವಾ ಪ್ರಕರಣದಲ್ಲಿ  ಗೊಗೊಯ್ ಅವರನ್ನು ಖುಲಾಸೆಗೊಳಿಸಲಾಗಿದ್ದು, ಇತರ ಪ್ರಕರಣಗಳು ಮುಂದುವರಿಯಲಿವೆ.

ಗೊಗೊಯ್ ಅವರು ಒಂದು ಪ್ರಕರಣದಲ್ಲಿ ಖುಲಾಸೆಯಾಗಿದ್ದು ಉಳಿದ ಪ್ರಕರಣಗಳು ಮುಂದುವರಿಯಲಿವೆ ಎಂದು ಗೊಗೊಯ್ ಪರ ವಕೀಲರಾದ ಸಂತನು ಬೊರ್ಥಾಕುರ್ The Indian Expressಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News