ನೆರೆಮನೆಯವರ ಕಿರುಕುಳ: 12ನೇ ಮಹಡಿಯಿಂದ ಮಗುವಿನೊಂದಿಗೆ ಜಿಗಿದು ಮಹಿಳೆ ಆತ್ಮಹತ್ಯೆ

Update: 2021-06-23 11:06 GMT

ಮುಂಬೈ: ಪಕ್ಕದ ಮನೆಯವರ ಕಾಟಕ್ಕೆ ಬೇಸತ್ತು ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಚಾಂದಿವಲಿಯಲ್ಲಿ ಮಂಗಳವಾರ ನಡೆದಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ರೇಷ್ಮಾ ತ್ರೆಂಚಿಲ್ (44 ವರ್ಷ)ಎಂಬ ಮಹಿಳೆ ಹಾಗೂ ಆರು ವರ್ಷದ ಮಗು ಸಾವನ್ನಪ್ಪಿದ್ದಾರೆ.

ಮಗು ಜೋರಾಗಿ ಅಳುತ್ತದೆ. ಇದರಿಂದ ನಮಗೆ ಕಿರಿಕಿರಿ ಆಗುತ್ತದೆ ಎಂದು ಪದೇ ಪದೇ ಅಕ್ಕ-ಪಕ್ಕದ ಮನೆಯವರು ನಮಗೆ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಅವರು ರೇಷ್ಮಾ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದರು.

ಘಟನೆಗೆ ಸಂಬಂಧಿಸಿ ಪೊಲೀಸರು ರೇಷ್ಮಾ ಅವರ ಪಕ್ಕದ ಮನೆಯ 33 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಳೆದ ಮೇ ನಲ್ಲಿ ರೇಷ್ಮಾ ಅವರ ಪತಿ ಶರತ್ ಮುಳಕುತ್ಲಾ ಅವರು ಕೊರೋನ ಸೋಂಕು ತಗಲಿ ಮೃತಪಟ್ಟಿದ್ದರು ಎಂದು ಎನ್ ಡಿ ಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News