ಕೋವಿಡ್ -19 ಡೆಲ್ಟಾ ಪ್ಲಸ್ ಪ್ರಭೇದಕ್ಕೆ ಮಧ್ಯಪ್ರದೇಶದಲ್ಲಿ ಮೊದಲ ಬಲಿ

Update: 2021-06-24 04:55 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್-19 ಡೆಲ್ಟಾ ಪ್ಲಸ್ ಪ್ರಬೇಧಕ್ಕೆ ನಂಟಿರುವ ಮೊದಲ ಸಾವಿನ ಪ್ರಕರಣವು ಮಧ್ಯಪ್ರದೇಶದಲ್ಲಿ ಬುಧವಾರ ವರದಿಯಾಗಿದೆ.

ಕೋವಿಡ್-19 ರೋಗಿಯಿಂದ ಉಜ್ಜೈನಿಯಲ್ಲಿ ಸಂಗ್ರಹಿಸಿರುವ ಸ್ಯಾಂಪಲ್ ನಲ್ಲಿ ರೋಗಿಗೆ ನೊವೆಲ್ ಕೊರೋನ ವೈರಸ್ ನ  ಡೆಲ್ಟಾ ಪ್ಲಸ್ ಪ್ರಭೇದ ತಗಲಿರುವುದು ಬಹಿರಂಗವಾಗಿದೆ.

ಮಧ್ಯಪ್ರದೇಶದಲ್ಲಿ ಈ ತನಕ ಒಟ್ಟು ಐದು ಡೆಲ್ಟಾ ಪ್ಲಸ್ ಪ್ರಭೇದದ ಪ್ರಕರಣಗಳು ದೃಢಪಟ್ಟಿವೆ. 5ರಲ್ಲಿ 3 ಕೇಸ್ ಗಳು ಭೋಪಾಲ್ ನಿಂದ ವರದಿಯಾಗಿದೆ ಉಳಿದೆರಡು ಕೇಸ್ ಗಳು ಉಜ್ಜೈನಿಯಲ್ಲಿ ವರದಿಯಾಗಿದೆ. ಡೆಲ್ಟಾ ಪ್ಲಸ್ ಪ್ರಭೇದ ಪತ್ತೆಯಾಗಿರುವ ಐವರು ಕೋವಿಡ್ ರೋಗಿಗಳಲ್ಲಿ ನಾಲ್ವರು ಚೇತರಿಸಿಕೊಂಡಿದ್ದು, ಓರ್ವ ಮಹಿಳೆ ವೈರಸ್ ಗೆ ಬಲಿಯಾಗಿದ್ದಾರೆ.

ಡೆಲ್ಟಾ ಪ್ಲಸ್ ಪ್ರಭೇದ ಪತ್ತೆಯಾಗಿರುವ ಕೋವಿಡ್ ಸಂತ್ರಸ್ತೆ ಮೇ 23ರಂದು ಉಜ್ಜೈನಿಯಲ್ಲಿ ನಿಧನರಾಗಿದ್ದಾರೆ.  ಮಹಿಳೆಗಿಂತ ಮೊದಲು ಆಕೆಯ ಪತಿಗೆ ಕೋವಿಡ್-19 ಸೋಂಕು ತಗಲಿತ್ತು ಎಂದು ಉಜ್ಜೈನ್ ನೋಡಲ್ ಕೋವಿಡ್ ಅಧಿಕಾರಿ ಡಾ.ರನೌಕ್ India Today ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News