ಸುಶೀಲ್ ಕುಮಾರ್ ತಿಹಾರ್ ಕಾರಾಗೃಹಕ್ಕೆ ವರ್ಗಾವಣೆ
Update: 2021-06-25 23:24 IST
ಕೋಲ್ಕತಾ, ಜೂ. 25: ಸಾಗರ್ ರಾಣಾ ಹತ್ಯೆ ಪ್ರಕರಣದ ಆರೋಪಿಯಾಗಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಮಂಡೋಲಿ ಕಾರಾಗೃಹದಿಂದ ತಿಹಾರ್ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಮೇ 4ರಂದು ಕಿರಿಯ ಕುಸ್ತಿಪಟು ಹಾಗೂ ಆತನ ಗೆಳೆಯನೊಂದಿಗೆ ಜಗಳ ಮಾಡಿದ್ದರು.
ಈ ಜಗಳದ ಸಂದರ್ಭ ಸುಶೀಲ್ ಕುಮಾರ್ ಅವರು ಸಾಗರ್ ರಾಣಾನನ್ನು ಹತ್ಯೆಗೈದಿದ್ದರು. ದೈನಂದಿನ ಪ್ರಕ್ರಿಯೆಯಂತೆ ಸುಶೀಲ್ ಕುಮಾರ್ ಅವರನ್ನು ಮಂಡೋಲಿ ಕಾರಾಗೃಹದಿಂದ ತಿಹಾರ್ ಕಾರಾಗೃಹಕ್ಕೆ ವರ್ಗಾಯಿಸಲಾಗುತ್ತಿದೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಭದ್ರತೆಯ ಕಾರಣಕ್ಕೆ ಅವರನ್ನು ಇಲ್ಲಿಂದ ವಗಾಯಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.