ಜಮ್ಮು ವಾಯುನೆಲೆಯಲ್ಲಿ ಸ್ಫೋಟಕಗಳನ್ನು ಬೀಳಿಸಲು ಡ್ರೋನ್ ಗಳ ಬಳಕೆ: ವರದಿ

Update: 2021-06-27 06:29 GMT

photo: @JammuUpdates
 

ಹೊಸದಿಲ್ಲಿ: ಜೂನ್ 26-27ರ ಮಧ್ಯರಾತ್ರಿಯಲ್ಲಿ ಜಮ್ಮುವಿನ  ಭಾರತೀಯ ವಾಯುಪಡೆ (ಐಎಎಫ್) ನಿಲ್ದಾಣದ ಉನ್ನತ ಭದ್ರತಾ ತಾಂತ್ರಿಕ ಪ್ರದೇಶದಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಬೀಳಿಸಲು ಕಡಿಮೆ ಸುಧಾರಿತ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಶಂಕಿಸಲಾಗಿದೆ ಎಂದು ಮೂಲಗಳನ್ನು ಉದ್ದೇಶಿಸಿ India Today ವರದಿ ಮಾಡಿದೆ.

 ಇದು ಬಹುಶಃ ದೇಶದ ಯಾವುದೇ ರಕ್ಷಣಾ ಸಂಸ್ಥೆಯ ಮೇಲಿನ ಮೊದಲ ಡ್ರೋನ್ ದಾಳಿಯಾಗಿದೆ. ಐಎಎಫ್ ಗಸ್ತು ತಂಡವೊಂದು ಮದ್ದುಗುಂಡುಗಳನ್ನು ಬೀಳಿಸುವುದನ್ನು ನೋಡಿದೆ ಎಂದು ಮೂಲಗಳು ತಿಳಿಸಿವೆ.

ರವಿವಾರ ಮುಂಜಾನೆ ಐದು ನಿಮಿಷಗಳ ಅವಧಿಯಲ್ಲಿ ಸ್ಫೋಟಗಳು ನಡೆದಿದ್ದವು. ಮುಂಜಾನೆ 1:37 ಕ್ಕೆ ಸಂಭವಿಸಿದ ಮೊದಲ ಸ್ಫೋಟಕ್ಕೆ ಕಟ್ಟಡದ ಮೇಲ್ಛಾವಣಿಗ ಕುಸಿದಿದ್ದರೆ, ಎರಡನೆಯ ಸ್ಪೋಟವು ಮುಂಜಾನೆ 1:42 ಕ್ಕೆ ಸಂಭವಿಸಿದ್ದು, ಇದರಿಂದ ಕಟ್ಟಡ ನೆಲಭಾಗ ಹಾನಿಯಾಗಿದೆ.

ಸ್ಫೋಟ ನಡೆಸಲು ಜಮ್ಮು ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಐಇಡಿಗಳನ್ನು ಬೀಳಿಸಲು ಡ್ರೋನ್‌ಗಳನ್ನು ಬಳಸಲಾಗಿದೆಯೆಂದು ಶಂಕಿಸಲಾಗಿದೆ. ಆದಾಗ್ಯೂ, ಈ ಡ್ರೋನ್‌ಗಳನ್ನು ರಾಡಾರ್ ಪತ್ತೆ ಮಾಡಿಲ್ಲ ಎಂದು India Today ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News