ಆರ್ಚರಿ ವಿಶ್ವಕಪ್ : ದೀಪಿಕಾ ಕುಮಾರಿಗೆ ಹ್ಯಾಟ್ರಿಕ್ ಚಿನ್ನ
Update: 2021-06-27 18:52 IST
ಹೊಸದಿಲ್ಲಿ. ಜೂ.27: ಪ್ಯಾರಿಸ್‌ನಲ್ಲಿ ರವಿವಾರ ನಡೆದ ಬಿಲ್ಲುಗಾರಿಕೆ ವಿಶ್ವಕಪ್ ಹಂತ 3 ರಲ್ಲಿ ವೈಯಕ್ತಿಕ ರಿಕರ್ವ್ ಸ್ಪರ್ಧೆಯ ಫೈನಲ್ ನಲ್ಲಿ ಜಯ ಗಳಿಸಿದ ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ವಿಶ್ವಕಪ್ ನಲ್ಲಿ ಒಂದೇ ದಿನ ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಜಯಿಸಿ ಮಿಂಚಿದರು.
ರವಿವಾರ ನಡೆದ ಮಹಿಳೆಯರ ಟೀಮ್ ವಿಭಾಗ ಹಾಗೂ ಮಿಶ್ರ ಟೀಮ್ ವಿಭಾಗದ ಸ್ಪರ್ಧೆಗಳಲ್ಲಿ ದೀಪಿಕಾ ಚಿನ್ನ ಜಯಿಸಿದ್ದರು.
ದೀಪಿಕಾ ವೈಯಕ್ತಿಕ ವಿಭಾಗದ ಫೈನಲ್ ಪಂದ್ಯದಲ್ಲಿ ರಶ್ಯದ ರಶ್ಯದ ಎಲೆನಾ ಒಸಿಪೊವಾ ಅವರನ್ನು 6-0 ಅಂತರದಿಂದ ಮಣಿಸಿದರು. ಇದರೊಂದಿಗೆ ಚಿನ್ನದ ಪದಕಗಳ ಹ್ಯಾಟ್ರಿಕ್ ಪೂರ್ಣಗೊಳಿಸಿದ್ದಾರೆ.