×
Ad

ಕೇಂದ್ರದ ಆದೇಶ ಮೇರೆಗೆ ಟ್ವಿಟರ್ ನೇಮಿಸಿದ್ದ 'ಕುಂದುಕೊರತೆ ಪರಿಹಾರ ಅಧಿಕಾರಿ' ರಾಜೀನಾಮೆ

Update: 2021-06-27 22:05 IST

ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಿಗಾಗಿ ಭಾರತದ ಹೊಸ ನಿಯಮಗಳನ್ನು ಅನುಸರಿಸಲು ಈ ತಿಂಗಳ ಆರಂಭದಲ್ಲಿ ನೇಮಕಗೊಂಡಿರುವ ಟ್ವಿಟರ್‌ನ ಹೊಸ ಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿ ಸರಕಾರದೊಂದಿಗಿನ ಕಂಪನಿಯ ತೀವ್ರ ತಿಕ್ಕಾಟದ ಮಧ್ಯೆ ರಾಜೀನಾಮೆ ನೀಡಿದ್ದಾರೆ ಎಂದು NDTV ವರದಿ ಮಾಡಿದೆ.

ಭಾರತದ ಟ್ವಿಟರ್ ಬಳಕೆದಾರರ ದೂರುಗಳಿಗೆ ಪರಿಹಾರ ಒದಗಿಸಲು ಅನುವಾಗುವಂತೆ ಸರಕಾರವು ಮಾಹಿತಿ ತಂತ್ರಜ್ಞಾನ ಹೊಸ ನಿಯಮಗಳ ಅಡಿಯಲ್ಲಿ ಕುಂದುಕೊರತೆ ಪರಿಹಾರ ಅಧಿಕಾರಿ ನೇಮಿಸುವುದನ್ನು ಕಡ್ಡಾಯಗೊಳಿಸಿದೆ.

ಧರ್ಮೇಂದ್ರ ಚತುರ್ ಅವರನ್ನು ಟ್ವಿಟರ್ ಇಂಡಿಯಾ ಇತ್ತೀಚೆಗಷ್ಟೇ ಹಂಗಾಮಿ ನಿವಾಸಿ ಕುಂದುಕೊರತೆ ಅಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅವರು ತಮ್ಮ ಸ್ಥಾನ ತೊರೆದಿರುವುದಾಗಿ ಮೂಲಗಳಿಂದ ತಿಳಿದುಬಂದಿರುವುದಾಗಿ ಪಿಟಿಐ ವರದಿ ಮಾಡಿದೆ.

ಮಧ್ಯವರ್ತಿ ಸಂಸ್ಥೆಗಳ ಮಾರ್ಗಸೂಚಿ  ಹಾಗೂ ಡಿಜಿಟಲ್ ಮಾಧ್ಯಮಗಳಿಗೆ ನೈತಿಕ ನಿಯಮಗಳು-2021ರ ಅಡಿಯಲ್ಲಿ ಕುಂದುಕೊರತೆ ಅಧಿಕಾರಿಯ ವಿವರವನ್ನು ಕಂಪನಿಯು ಪ್ರದರ್ಶಿಸಬೇಕು. ಆದರೆ ಟ್ವಿಟರ್ ನ ವೆಬ್ ಸೈಟ್ ನಲ್ಲಿ ಧರ್ಮೇಂದ್ರ ಚತುರ್ ಅವರ ಹೆಸರು ಕಾಣಿಸುತ್ತಿಲ್ಲ.,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News