ಭಾರತ ಸರಕಾರದ ಸಾಲದ ಪ್ರಮಾಣ ಜಿಡಿಪಿಯ ಶೇ.58.8ಕ್ಕೆ ಏರಿಕೆ
Update: 2021-06-28 13:59 IST
ಹೊಸದಿಲ್ಲಿ : ಈ ವರ್ಷದ ಮಾರ್ಚ್ ಅಂತ್ಯಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಭಾರತ ಸರಕಾರದ ಸಾಲದ ಪ್ರಮಾಣವು ಜಿಡಿಪಿಯ ಶೇ58.8ಕ್ಕೆ ಏರಿಕೆಯಾಗಿದ್ದು ಒಂದು ವರ್ಷದ ಹಿಂದೆ ಈ ಪ್ರಮಾಣ ಶೇ51.6ರಷ್ಟಾಗಿತ್ತು. ಕೋವಿಡ್ ಸಾಂಕ್ರಾಮಿಕದಿಂದ ಉದ್ಭವಿಸಿದ ಆರ್ಥಿಕ ಸಮಸ್ಯೆಯಿಂದಾಗಿ ವಿತ್ತೀಯ ಕೊರತೆಯನ್ನು ನೀಗಿಲು ಸರಕಾರ ಸಾಕಷ್ಟು ಸಾಲ ಮಾಡಬೇಕಾಯಿತು ಎಂದು ವಿತ್ತ ಸಚಿವಾಲಯದ ಅಂಕಿಅಂಶಗಳು ತೋರಿಸುತ್ತವೆ ಎಂದು livemint.com ವರದಿ ಮಾಡಿದೆ.
ಆರ್ಥಿಕ ವರ್ಷ 2020-21ರಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇ9.2ರಷ್ಟಿದ್ದರೆ ಒಂದು ವರ್ಷದ ಹಿಂದೆ ಇದು ಶೇ4.6ರಷ್ಟಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಇದು ಗರಿಷ್ಠ ಎಂದು ತಿಳಿಯಲಾಗಿದೆ. ದೇಶದ ಆರ್ಥಿಕತೆ ಶೇ7.3ರಷ್ಟು ಕುಸಿತ ಕಂಡು ಆದಾಯ ಸಂಗ್ರಹವೂ ಶೇ3ರಷ್ಟು ಇಳಿಕೆಯಾದ ಪರಿಣಾಮ ಇದೆಂದು ಬಣ್ಣಿಸಲಾಗಿದೆ.
ದೇಶದ ವಿತ್ತೀಯ ಅನಿಶ್ಚಿತತೆಯೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು 15ನೇ ವೇತನ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.