ಗರ್ಭಿಣಿಯರಿಗೆ ಕೋವಿಡ್ ಲಸಿಕೆ: ಮಾರ್ಗಸೂಚಿ ಬಿಡುಗಡೆ

Update: 2021-06-29 17:44 GMT

ಲಕ್ನೋ, ಜೂ. 29: ಕೋವಿಡ್ ಲಸಿಕೆಯ ವೌಲ್ಯ ಹಾಗೂ ಮುನ್ನೆಚ್ಚರಿಕೆ ಕುರಿತು ಗರ್ಭಿಣಿಯರೊಂದಿಗೆ ಸಮಾಲೋಚನೆ ನಡೆಸಲು ಮುಂಚೂಣಿ ಕಾರ್ಯಕರ್ತರು ಹಾಗೂ ಲಸಿಕೆ ನೀಡುವವರಿಗೆ ಮಾರ್ಗದರ್ಶನ ಒದಗಿಸಲು ಕೇಂದ್ರ ಆರೋಗ್ಯ ಸಚಿವಾಲಯ ಫ್ಯಾಕ್ಟ್-ಶೀಟ್ ಸಿದ್ಧಪಡಿಸಿದೆ.

ಶೇ. 90 ಕೋವಿಡ್ ಸೋಂಕಿತ ಗರ್ಭಿಣಿಯರು ಯಾವುದೇ ಆಸ್ಪತ್ರೆಗೆ ದಾಖಲಾಗದೆ ಗುಣಮುಖರಾಗುತ್ತಿದ್ದರೂ, ಆರೋಗ್ಯದಲ್ಲಿ ತೀವ್ರಾಗಿ ಕ್ಷೀಣಿಸುತ್ತಿರುವುದು ಕೆಲವರಲ್ಲಿ ಸಂಭವಿಸಬಹುದು. ಅಲ್ಲದೆ, ಅದು ಭ್ರೂಣದ ಮೇಲೂ ಪರಿಣಾಮ ಬೀರಬಹುದು ಎಂದು ಫ್ಯಾಕ್ಟ್-ಶೀಟ್ ತಿಳಿಸಿವೆ.

ಆದುದರಿಂದ ಗರ್ಭಿಣಿಯರು ಕೋವಿಡ್ ಲಸಿಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಆದರೆ, ಗರ್ಭಧಾರಣೆಯು ಕೋವಿಡ್ ಸೋಂಕಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಅದು ಒತ್ತಿ ಹೇಳಿದೆ.

ರೋಗಲಕ್ಷಣವುಳ್ಳ ಗರ್ಭಿಣಿಯರಲ್ಲಿ ಗಂಭೀರ ರೋಗ ಲಕ್ಷಣ ಕಂಡು ಬರಬಹುದು ಹಾಗೂ ಸಾವು ಸಂಭವಿಸಬಹುದು. ಗಂಭೀರ ರೋಗದ ಪ್ರಕರಣಗಳಲ್ಲಿ ಇತರ ರೋಗಿಗಳಂತೆ ಗರ್ಭಿಣಿಯರು ಕೂಡ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇರುತ್ತದೆ.

ಅಧಿಕ ರಕ್ತದೊತ್ತಡ, ಬೊಜ್ಜು ಹಾಗೂ 35 ವರ್ಷಕ್ಕಿಂತ ಮೇಲ್ಪಟ್ಟ ವೈದ್ಯಕೀಯ ಸ್ಥಿತಿ ಹೊಂದಿರುವ ಗರ್ಭಿಣಿಯರಿಗೆ ಕೋವಿಡ್ನಿಂದ ಗಂಭೀರ ಅನಾರೋಗ್ಯದ ಅಪಾಯವಿದೆ.

ಕೋವಿಡ್ ಲಸಿಕೆಯ ಲಭ್ಯತೆ, ಮೌಲ್ಯ ಹಾಗೂ ಮುನ್ನೆಚ್ಚರಿಕೆ ಬಗ್ಗೆ ಗರ್ಭಿಣಿಯರೊಂದಿಗೆ ಮುಂಚೂಣಿ ಕಾರ್ಯಕರ್ತರು ಅಥವಾ ಲಸಿಕೆ ನೀಡುವವರು ಸಮಾಲೋಚನೆ ನಡೆಸುವ ಅಗತ್ಯತೆ ಇದೆ ಎಂದು ಫ್ಯಾಕ್ಟ್-ಶೀಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News