2022ರಲ್ಲಿ ಉ.ಪ್ರದೇಶದಲ್ಲಿ ಚುನಾವಣೆಯಲ್ಲ, ಕ್ರಾಂತಿ ನಡೆಯಲಿದೆ: ಅಖಿಲೇಶ್ ಯಾದವ್

Update: 2021-06-30 18:16 GMT

ಲಕ್ನೋ, ಜೂ.30: ರಾಜ್ಯದಲ್ಲಿ ಈಗ ಇರುವ ಅವ್ಯವಸ್ಥಿತ ಮತ್ತು ನಕಾರಾತ್ಮಕ ರಾಜಕೀಯ ವ್ಯವಸ್ಥೆಯನ್ನು ವಿರೋಧಿಸಿ 2022ರಲ್ಲಿ ಉತ್ತರಪ್ರದೇಶದಲ್ಲಿ ಪ್ರಜಾಸತ್ತಾತ್ಮಕ ಕ್ರಾಂತಿ ನಡೆಯಲಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.

ಈಗಿನ ಅವ್ಯವಸ್ಥಿತ, ಸಂಪ್ರದಾಯವಾದಿ, ನಕಾರಾತ್ಮಕ ರಾಜಕೀಯದ ವಿರುದ್ಧ ಒಗ್ಗೂಡಿ. ಶೋಷಿತ ವರ್ಗದ, ತಿರಸ್ಕೃತವಾದವರ, ಅವಮಾನಿತರ, ದಲಿತರ, ತುಳಿತಕ್ಕೆ ಒಳಗಾದವರ, ಬಡವರ, ರೈತರ, ಕಾರ್ಮಿಕರ, ಮಹಿಳೆಯರು ಮತ್ತು ಮಕ್ಕಳ ಪರವಾದ ಹೊಸ ಸರಕಾರದ ರಚನೆಗೆ ಮುನ್ನುಡಿ ಬರೆಯಲಾಗುತ್ತಿದೆ ಎಂದವರು ಟ್ವೀಟ್ ಮಾಡಿದ್ದಾರೆ.

2022ರಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯುವುದಿಲ್ಲ, ಪ್ರಜಾಸತ್ತಾತ್ಮಕ ಕ್ರಾಂತಿ ನಡೆಯಲಿದೆ. ರಾಜ್ಯ ವಿಧಾನಸಭೆಯ 403 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ 350ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಜನತೆ ಬಿಜೆಪಿ ಸರಕಾರದ ವಿರುದ್ಧ ನಿಂತಿದ್ದಾರೆ ಎಂದು ಯಾದವ್ ಪ್ರತಿಪಾದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News