ಕೇರಳದ ಕಾಂಗ್ರೆಸ್ ಮುಖಂಡರಿಗೆ ಲಕ್ಷದ್ವೀಪ ಭೇಟಿಗೆ ಅನುಮತಿ ನಿರಾಕರಣೆ
Update: 2021-07-04 13:59 IST
ಕೊಚ್ಚಿ: ಲಕ್ಷದ್ವೀಪ ಆಡಳಿತವು ಕೇರಳದ ಕಾಂಗ್ರೆಸ್ ನಾಯಕರಿಗೆ ಲಕ್ಷ ದ್ವೀಪಕ್ಕೆ ಭೇಟಿ ನೀಡಲು ಶನಿವಾರ ಅನುಮತಿ ನಿರಾಕರಿಸಿದೆ.
ಲಕ್ಷದ್ವೀಪ ಅಭಿವೃದ್ದಿ ನಿಯಂತ್ರಣ ಪ್ರಾಧಿಕಾರವನ್ನು ವಿರೋಧಿಸಿ ಲಕ್ಷದ್ವೀಪದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಚಟುವಟಿಕೆಗಳು ದ್ವೀಪದ ಶಾಂತಿಯುತ ವಾತಾವರಣವನ್ನು ಹಾಳುಗೆಡಹುವ ಸಾಧ್ಯತೆಯಿದೆ. ಹಾಗಾಗಿ ಕಾಂಗ್ರೆಸ್ ನಾಯಕರ ಭೇಟಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.
ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲಿ ಅವರು ಕಾಂಗ್ರೆಸ್ ನಾಯಕರಾದ ಟಿ.ಎನ್.ಪ್ರತಾಪನ್, ಹಿಬಿ ಎಡೆನ್ ಹಾಗೂ ಕಾಂಗ್ರೆಸ್ ನ ಮೀನುಗಾರಿಕೆ ಘಟಕದ ರಾಷ್ಟ್ರೀಯ ಕಾನೂನು ಸಲಹೆಗಾರ ಸಿ.ಆರ್. ರಾಕೇಶ್ ಶರ್ಮಾ ಅವರಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಿದ್ದಾರೆ.