×
Ad

ಉತ್ತರಾಖಂಡ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ

Update: 2021-07-04 17:57 IST
photo: ANI

ಹೊಸದಿಲ್ಲಿ: ಉತ್ತರಾಖಂಡದ 11 ನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ರವಿವಾರ ಪ್ರಮಾಣ ವಚನ ಸ್ವೀಕರಿಸಿದರು. ಧಾಮಿ ಉತ್ತರಾಖಂಡದ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಾಗಿದ್ದಾರೆ.

ಡೆಹ್ರಾಡೂನ್‌ನ ರಾಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರು ಪ್ರಮಾಣವಚನ ಬೋಧಿಸಿದರು.

ಬಿಜೆಪಿ ಶಾಸಕರಾದ ಸತ್ಪಾಲ್ ಮಹಾರಾಜ್, ಹರಾಕ್ ಸಿಂಗ್ ರಾವತ್, ಬನ್ಸಿಧರ್ ಭಗತ್ ಹಾಗೂ ಯಶ್ಪಾಲ್ ಆರ್ಯ ಕೂಡ ಹೊಸ ಉತ್ತರಾಖಂಡ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಶನ್ ಸಿಂಗ್ ಚುಫಲ್, ಸುಬೋಧ್ ಯುನಿಯಲ್, ಅರವಿಂದ್ ಪಾಂಡೆ, ಗಣೇಶ್ ಜೋಶಿ, ಧನ್ ಸಿಂಗ್ ರಾವತ್, ರೇಖಾ ಆರ್ಯ ಮತ್ತು ಸ್ವಾಮಿ ಯತಿಶ್ವರಾನಂದ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶನಿವಾರ ನಡೆದ ಬಿಜೆಪಿಯ ಶಾಸಕಾಂಗ ಸಭೆಯಲ್ಲಿ 45 ವರ್ಷದ ಧಾಮಿಯವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ವರದಿಗಳ ಪ್ರಕಾರ, ಉತ್ತರಾಖಂಡ ಘಟಕದ ಹಲವಾರು ಹಿರಿಯ ಬಿಜೆಪಿ ನಾಯಕರಿಗೆ ಧಾಮಿಗೆ ಸಿಎಂ ಸ್ಥಾನ ನೀಡಿರುವ  ಬಗ್ಗೆ ಅಸಮಾಧಾನವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News