×
Ad

ಆನ್ ಲೈನ್ ತರಗತಿಗೆ ಮೊಬೈಲ್ ಫೋನ್ ಇಲ್ಲದಿದ್ದರೂ 10ನೇ ತರಗತಿಯಲ್ಲಿ ಶೇ.98ರಷ್ಟು ಅಂಕ ಪಡೆದ ಕಾಶ್ಮೀರದ ಬಾಲಕ

Update: 2021-07-04 18:56 IST
photo: ANI

ಹೊಸದಿಲ್ಲಿ: ರಾಜ್ಯ ಶಿಕ್ಷಣ ಮಂಡಳಿ ಘೋಷಿಸಿದ 10 ನೇ ತರಗತಿ ಫಲಿತಾಂಶದಲ್ಲಿ ಶೇ. 98.02 ಅಂಕ ಪಡೆದ ಜಮ್ಮು-ಕಾಶ್ಮೀರದ ಉಧಂಪುರದ ಬಾಲಕನೊಬ್ಬ  ಹಲವು ಅಡೆತಡೆಗಳನ್ನು ಮೀರಿ ತನ್ನ ಜಿಲ್ಲೆಗೆ ಅಗ್ರಸ್ಥಾನ ಪಡೆದಿದ್ದಾನೆ.

"ಕಳೆದ ವರ್ಷ ಲಾಕ್‌ಡೌನ್ ಆಗಿದ್ದರಿಂದ ನನಗೆ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ ಹಾಗೂ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು  ಫೋನ್ ಅಥವಾ ಕಂಪ್ಯೂಟರ್ ನನ್ನಲ್ಲಿ ಇರಲಿಲ್ಲ'' ಎಂದು ಮಂದೀಪ್ ಸಿಂಗ್ ಹೇಳಿದ್ದಾನೆ.

ಮಂದೀಪ್ ಸಂಪೂರ್ಣ ಸಮರ್ಪಣೆಯಿಂದ ಹಾಗೂ  ತನ್ನ ಕುಟುಂಬ ಸದಸ್ಯರು ಮತ್ತು ಶಿಕ್ಷಕರ ಸಹಾಯದಿಂದ ಚೆನ್ನಾಗಿ ಅಧ್ಯಯನ ಮಾಡಿದ್ದಲ್ಲದೆ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾನೆ.

ವೈದ್ಯನಾಗಬೇಕೆಂಬ ಆಸೆ ಹೊಂದಿರುವ ಬಾಲಕ  ಅಮ್ರೋ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಈತನ ತಂದೆ ಶ್ಯಾಮ್ ಸಿಂಗ್ ಒಬ್ಬ ಕೃಷಿಕ.  ಅಲ್ಲಿ ಮಂದೀಪ್ ಕೂಡ ಕೆಲವೊಮ್ಮೆ ಕೆಲಸ ಮಾಡಬೇಕಾಗುತ್ತದೆ. ಅವರ ತಾಯಿ ಸಂಧ್ಯಾ ದೇವಿ ಗೃಹಿಣಿ.

"ಅಧ್ಯಯನದ ಜೊತೆಗೆ, ನಾನು ಹೊಲದಲ್ಲಿ ಕೆಲಸ ಮಾಡುತ್ತೇನೆ ಹಾಗೂ  ಮನೆಕೆಲಸಗಳಲ್ಲಿ ನನ್ನ ಪೋಷಕರಿಗೆ ಸಹಾಯ ಮಾಡುತ್ತೇನೆ" ಎಂದು ಮಂದೀಪ್ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News