ಶಿವಸೇನೆ ಎಂದಿಗೂ ನಮ್ಮ ಶತ್ರುವಲ್ಲ: ದೇವೇಂದ್ರ ಫಡ್ನವಿಸ್
Update: 2021-07-04 22:21 IST
ಮುಂಬೈ: ಸಾಮಾನ್ಯವಾಗಿ ಉದ್ಧವ್ ಠಾಕ್ರೆ ಸರಕಾರದ ಮೇಲೆ ಬಿಜೆಪಿಗರ ದಾಳಿಯನ್ನು ಮುನ್ನಡೆಸುತ್ತಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಇಂದು ಶಿವಸೇನೆ ಎಂದಿಗೂ ನಮ್ಮ ಶತ್ರು ಅಲ್ಲ ಎಂದು ಘೋಷಿಸಿದರು.
ಇಬ್ಬರು ಮಾಜಿ ಮಿತ್ರಪಕ್ಷಗಳು ಒಟ್ಟಿಗೆ ಸೇರುವ ಸಾಧ್ಯತೆ ಇದೆಯೇ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಫಡ್ನವಿಸ್ , ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು "ಸೂಕ್ತ ನಿರ್ಧಾರ" ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
"ನಾವು (ಸೇನಾ ಮತ್ತು ಬಿಜೆಪಿ) ಎಂದಿಗೂ ಶತ್ರುಗಳಲ್ಲ. ಅವರು ನಮ್ಮ ಸ್ನೇಹಿತರು ಹಾಗೂ ಅವರು ತಾವು ಹೋರಾಡಿದ ಜನರೊಂದಿಗೆ ಸರಕಾರವನ್ನು ರಚಿಸಿದರು ಹಾಗೂ ಅವರು ನಮ್ಮನ್ನು ತೊರೆದರು" ಎಂದು ಕೇಂದ್ರ ಗೃಹ ಸಚಿವರ ಭೇಟಿಯ ಬಗ್ಗೆ ಕೇಳಿದಾಗ ಫಡ್ನವಿಸ್ ಉತ್ತರಿಸಿದರು.