ಕ್ರೀಡಾ ಸಚಿವರಾಗಿ ಅನುರಾಗ್ ಠಾಕೂರ್ ಅಧಿಕಾರ ಸ್ವೀಕಾರ

Update: 2021-07-08 14:00 GMT

ಹೊಸದಿಲ್ಲಿ: ಕಿರಣ್  ರಿಜಿಜು ಅವರ ಉತ್ತರಾಧಿಕಾರಿಯಾಗಿ ದೇಶದ 17 ನೇ ಕ್ರೀಡಾ ಸಚಿವರಾಗಿ ಅನುರಾಗ್ ಠಾಕೂರ್ ಗುರುವಾರ ಅಧಿಕಾರ ವಹಿಸಿಕೊಂಡರು. ಭಾರತವನ್ನು ಕ್ರೀಡಾ ಶಕ್ತಿ ಕೇಂದ್ರವನ್ನಾಗಿ ಮಾಡಲು ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

46 ವರ್ಷದ  ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷರಾದ ಠಾಕೂರ್ ಬುಧವಾರ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ಕ್ರೀಡಾ ಮತ್ತು ಯುವ ವ್ಯವಹಾರಗಳ ಜವಾಬ್ದಾರಿಯನ್ನು ನೀಡಲಾಯಿತು.

ಜುಲೈ 23 ರಿಂದ  ಆರಂಭವಾಗಲಿರುವ ಒಲಿಂಪಿಕ್ಸ್  ಕ್ರೀಡಾಕೂಟಕ್ಕೆ ರಾಷ್ಟ್ರದ ಕ್ರೀಡಾಪಟುಗಳು ಸಿದ್ಧತೆ ನಡೆಸಲು ಅಂತಿಮ ಹಂತದಲ್ಲಿರುವ ಸಮಯದಲ್ಲಿ ಅವರು ಅಧಿಕಾರವಹಿಸಿಕೊಂಡಿದ್ದಾರೆ.

ಮಣಿಶಂಕರ್ ಅಯ್ಯರ್ (2006-2008) ನಂತರ ಕ್ರೀಡಾ ಸಚಿವಾಲಯದ ಜವಾಬ್ದಾರಿಯನ್ನು ಪಡೆದ ಮೊದಲ ಕ್ಯಾಬಿನೆಟ್ ಮಂತ್ರಿ ಠಾಕೂರ್. ಬಂಗಾಳದ ಯುವ ನಾಯಕನಾಗಿರುವ  ನಿಸಿತ್ ಪ್ರಮಾಣಿಕ್ ಕ್ರೀಡಾ ರಾಜ್ಯ ಸಚಿವರಾಗಿ ನೇಮಕಗೊಳ್ಳುವುದರ ಜೊತೆಗೆ ಗೃಹ ಸಚಿವಾಲಯದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News