×
Ad

ಹರ್ಯಾಣದಲ್ಲಿ ಜುಲೈ 16ರಿಂದ ಸರಕಾರಿ, ಖಾಸಗಿ ಶಾಲೆಗಳು ಪುನರಾರಂಭ

Update: 2021-07-09 20:24 IST

ಚಂಡೀಗಡ: ಕೋವಿಡ್ ಪ್ರಕರಣಗಳ ಸ್ಥಿರ ಕುಸಿತದ ಮಧ್ಯೆ, ಹರ್ಯಾಣ ಸರ್ಕಾರವು ರಾಜ್ಯದ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸಲು ಮುಂದಾಗಿದೆ.

ಸುರಕ್ಷಿತ ಅಂತರದೊಂದಿಗೆ ಜುಲೈ 16ರಿಂದ 9ರಿಂದ 12ನೇ ತರಗತಿಗಳನ್ನು ಪುನರಾರಂಭಿಸಲಾಗುವುದು. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಇತರ ತರಗತಿಗಳನ್ನು ಪುನರಾರಂಭಿಸಲಾಗುವುದು ಎಂದು ಹರ್ಯಾಣ ಶಿಕ್ಷಣ ಸಚಿವರು ಹೇಳಿದ್ದಾರೆ.

ಶಾಲಾ ಶಿಕ್ಷಣ ನಿರ್ದೇಶನಾಲಯ ಹೊರಡಿಸಿದ ಆದೇಶದ ಪ್ರಕಾರ ಜುಲೈ 16 ರಿಂದ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳು ಪುನರಾರಂಭಗೊಳ್ಳುತ್ತವೆ. 6ರಿಂದ 8ನೇ  ತರಗತಿಗಳಿಗೆ ಜುಲೈ 23 ರಿಂದ ಆಫ್‌ಲೈನ್ ತರಗತಿಗಳು ಪುನರಾರಂಭಗೊಳ್ಳುತ್ತವೆ.

1  ರಿಂದ 5ನೇ ತರಗತಿಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸುವ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೋವಿಡ್ ಸೋಂಕಿನ ಏರಿಕೆಯ ನಂತರ ಆರಂಭವಾದ ಆನ್‌ಲೈನ್ ತರಗತಿಗಳು ಮುಂದುವರಿಯಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News