×
Ad

ಅಯೋಧ್ಯೆ:ಸರಯೂ ನದಿಯಲ್ಲಿ ಸ್ನಾನ ಮಾಡುವಾಗ ಒಂದೇ ಕುಟುಂಬದ 6 ಮಂದಿ ಮುಳುಗಿ ಮೃತ್ಯು

Update: 2021-07-09 22:53 IST

 ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುವಾಗ ಬಲವಾದ ಪ್ರವಾಹಕ್ಕೆ ಸಿಲುಕಿ  ಒಂದೇ ಕುಟುಂಬದ ಹನ್ನೆರಡು ಸದಸ್ಯರು ಕೊಚ್ಚಿ ಹೋಗಿದ್ದು,  ಆರು ಶವಗಳನ್ನು ಹೊರತೆಗೆಯಲಾಗಿದ್ದರೆ, ಇತರ ಮೂವರನ್ನು ರಕ್ಷಿಸಲಾಗಿದೆ. ಇನ್ನೂ ಮೂವರು ಕುಟುಂಬ ಸದಸ್ಯರು ಕಾಣೆಯಾಗಿದ್ದಾರೆ.

ಅಯೋಧ್ಯೆಯ ಗುಪ್ತಾರ್ ಘಾಟ್‌ನಲ್ಲಿ ಕುಟುಂಬದ 12 ಸದಸ್ಯರು ಸ್ನಾನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ರಕ್ಷಿಸಿದ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ನಾಪತ್ತೆಯಾದವರಿಗಾಗಿ ಪೊಲೀಸರು ಹಾಗೂ  ಸ್ಥಳೀಯ ಮುಳುಗು ತಜ್ಞರುಗಳು ಶೋಧ  ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

15 ಜನರ ಕುಟುಂಬವು ಆಗ್ರಾ ಮೂಲದವರಾಗಿದ್ದು, ಈ ಘಟನೆ ನಡೆದಾಗ ಅಯೋಧ್ಯೆಗೆ ಭೇಟಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News