×
Ad

ಕೇಂದ್ರ ಸಚಿವರ ಸಂಖ್ಯೆಯಲ್ಲಿ ಏರಿಕೆಯಾಗಿದೆಯೇ ಹೊರತು ಲಸಿಕೆ ನೀಡಿಕೆ ಪ್ರಮಾಣದಲ್ಲಲ್ಲ: ರಾಹುಲ್ ಕಿಡಿ

Update: 2021-07-12 15:25 IST

ಹೊಸದಿಲ್ಲಿ: ಕೇಂದ್ರ ಸರಕಾರ ಇತ್ತೀಚೆಗೆ ನಡೆಸಿರುವ ಸಚಿವ ಸಂಪುಟ ವಿಸ್ತರಣೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವರ ಸಂಖ್ಯೆ ಏರಿಕೆಯಾಗಿದೆ ಆದರೆ ದೇಶದಲ್ಲಿ ಲಭ್ಯ ಕೋವಿಡ್-19 ಲಸಿಕೆ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಜತೆಗೆ ಎನ್‍ಡಿಟಿವಿ ಪೋಸ್ಟ್ ಮಾಡಿದ ಭಾರತದ ಲಸಿಕಾ ಅಭಿಯಾನ ಕುರಿತಾದ ಒಂದು ಚಾರ್ಟ್ ಅನ್ನೂ ಶೇರ್ ಮಾಡಿದ್ದಾರೆ. ಈ ಚಾರ್ಟ್ ಪ್ರಕಾರ ಮೂರನೇ ಅಲೆ ತಡೆಯಬೇಕಿದ್ದರೆ ದೇಶದ ಶೇ60ರಷ್ಟು ಜನಸಂಖ್ಯೆಯನ್ನು ಡಿಸೆಂಬರ್ ಒಳಗೆ ಲಸಿಕೆ ನೀಡಬೇಕಿದೆ. ಇದಕ್ಕಾಗಿ ಪ್ರತಿ ದಿನ ಸರಾಸರಿ 8.8 ಮಿಲಿಯನ್ ಜನರಿಗೆ ಲಸಿಕೆ ನೀಡಬೇಕಿದೆ ಎಂದು ವಿವರಿಸಲಾಗಿದೆ.

ಜತೆಗೆ ಈ ಚಾರ್ಟ್ ನಲ್ಲಿ ಕಳೆದ ಏಳು ದಿನಗಳಲ್ಲಿ ನೀಡಲಾಗಿರುವ ಲಸಿಕೆಗಳ ಸಂಖ್ಯೆಯನ್ನು ನೀಡಲಾಗಿದೆ. ಜುಲೈ 10ರಂದು ದೇಶದಲ್ಲಿ 3.7 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದೆ, ಎಂದರೆ ನಿಗದಿತ ಗುರಿಯಾದ 8.8 ಮಿಲಿಯನ್ ತಲುಪಲು 5.1 ಮಿಲಿಯನ್ ಡೋಸ್ ನೀಡಿಕೆ ಕೊರತೆಯುಂಟಾಗಿದೆ ಎಂದು ಚಾರ್ಟ್‍ನಲ್ಲಿ ವಿವರಿಸಲಾಗಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ಗರಿಷ್ಠ 81 ಸಚಿವರಿರಬಹುದಾದರೆ ಇತ್ತೀಚಿಗಿನ ಸಂಪುಟ ವಿಸ್ತರಣೆಯಲ್ಲಿ ಕೇಂದ್ರ ಸಚಿವರ ಸಂಖ್ಯೆ 78ಕ್ಕೆ ಏರಿಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News