ಈಜಿಪ್ಟ್: ಮುಸ್ಲಿಮ್ ಬ್ರದರ್ ಹುಡ್ ನಾಯಕರ ಜೀವಾವಧಿ ಶಿಕ್ಷೆ ಖಾಯಂ

Update: 2021-07-12 16:29 GMT

ಕೈರೋ (ಈಜಿಪ್ಟ್), ಜು. 12: ಈಜಿಪ್ಟ್ನ ಮುಸ್ಲಿಮ್ ಬ್ರದರ್ಹುಡ್ ಸಂಘಟನೆಯ ಮುಖ್ಯಸ್ಥ ಸೇರಿದಂತೆ 10 ನಾಯಕರಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ದೇಶದ ಅತ್ಯುನ್ನತ ಮೇಲ್ಮನವಿ ನ್ಯಾಯಾಲಯ ರವಿವಾರ ಎತ್ತಿಹಿಡಿದಿದೆ ಎಂದು ಸರಕಾರಿ ಒಡೆತದನ ಸುದ್ದಿ ಸಂಸ್ಥೆ ‘ಮೆನ’ ವರದಿ ಮಾಡಿದೆ.

ಈಜಿಪ್ಟ್ ನ 2011ರ ಬಂಡಾಯದ ವೇಳೆ ಪೊಲೀಸರನ್ನು ಕೊಂದ ಮತ್ತು ಜೈಲುಗಳನ್ನು ಮುರಿದ ಆರೋಪವನ್ನು ಮುಸ್ಲಿಮ್ ಬ್ರದರ್ ಹುಡ್‌ ನ ಮುಖ್ಯಸ್ಥ ಮುಹಮ್ಮದ್ ಬದೀ ಸೇರಿದಂತೆ ಸಂಘಟನೆಯ 10 ನಾಯಕರ ವಿರುದ್ಧ ಹೊರಿಸಲಾಗಿತ್ತು. ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ ಎಂಬುದಾಗಿ ಕೈರೋದ ಕ್ರಿಮಿನಲ್ ನ್ಯಾಯಾಲಯವೊಂದು 2019ರಲ್ಲಿ ತೀರ್ಪು ನೀಡಿತ್ತು. ರವಿವಾರ ಆ ತೀರ್ಪನ್ನು ಮೇಲ್ಮನವಿ ನ್ಯಾಯಾಲಯವು ಎತ್ತಿಹಿಡಿದಿದೆ.

2011ರ ಬಂಡಾಯದ ವೇಳೆ, ದೀರ್ಘಾವಧಿಯಿಂದ ಈಜಿಪ್ಟ್ ಆಳುತ್ತಿದ್ದ ಹುಸ್ನಿ ಮುಬಾರಕ್ ರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಈ ನಡುವೆ, ಇದಕ್ಕೂ ಮೊದಲು 15 ವರ್ಷದ ಜೈಲು ಶಿಕ್ಷೆಗೆ ಒಳಗಾಗಿದ್ದ ಮುಸ್ಲಿಮ್ ಬ್ರದರ್ಹುಡ್ ನ 8 ಮಧ್ಯಮ ಹಂತದ ನಾಯಕರನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News