ದಕ್ಷಿಣ ಚೀನಾ ಸಮುದ್ರದಿಂದ ಅಮೆರಿಕ ಯುದ್ಧನೌಕೆಯನ್ನು ಓಡಿಸಿದ್ದೇವೆ: ಚೀನಾ ಸೇನೆ

Update: 2021-07-12 17:05 GMT

ಬೀಜಿಂಗ್, ಜು. 12: ಪಾರಾಸೆಲ್ ದ್ವೀಪದ ಸಮೀಪದ ಚೀನಾ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಅಮೆರಿಕದ ಯುದ್ಧನೌಕೆಯೊಂದನ್ನು ಓಡಿಸಿರುವುದಾಗಿ ಚೀನಾ ಸೇನೆ ಸೋಮವಾರ ಹೇಳಿದೆ.

ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಹಕ್ಕು ಸ್ಥಾಪಿಸುವಂತಿಲ್ಲ ಎಂಬುದಾಗಿ ಅಂತರ್ರಾಷ್ಟ್ರೀಯ ನ್ಯಾಯಾಲಯವೊಂದು ತೀರ್ಪು ನೀಡಿದ ವಾರ್ಷಿಕ ದಿನವಾದ ಸೋಮವಾರ ಈ ಬೆಳವಣಿಗೆ ಸಂಭವಿಸಿದೆ.

ಅಮೆರಿಕದ ಯುದ್ಧನೌಕೆ ಯುಎಸ್ಎಸ್ ಬೆನ್ಫೋಲ್ಡ್ ಚೀನಾ ಸರಕಾರದ ಅನುಮತಿಯಿಲ್ಲದೆ ಪಾರಾಸೆಲ್ಸ್ ಜಲಪ್ರವೇಶವನ್ನು ಪ್ರವೇಶಿಸಿದೆ ಹಾಗೂ ಆ ಮೂಲಕ ಚೀನಾದ ಸಾರ್ವಭೌಮತೆಯನ್ನು ಉಲ್ಲಂಘಿಸಿದೆ ಹಾಗೂ ದಕ್ಷಿಣ ಚೀನಾ ಸಮುದ್ರದ ಸ್ಥಿರತೆಯನ್ನು ಕಡೆಗಣಿಸಿದೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿಯ ದಕ್ಷಿಣ ತಿಯೇಟರ್ ಕಮಾಂಡ್ ಹೇಳಿದೆ.

‘‘ಇಂಥ ಪ್ರಚೋದನಾತ್ಮಕ ವರ್ತನೆಗಳನ್ನು ತಕ್ಷಣ ನಿಲ್ಲಿಸುವಂತೆ ನಾವು ಅಮೆರಿಕವನ್ನು ಒತ್ತಾಯಿಸುತ್ತೇವೆ’’ ಎಂದು ಸದರ್ನ್ ತಿಯೇಟರ್ ಕಮಾಂಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಮೆರಿಕ ನೌಕಾಪಡೆ ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿಲ್ಲ.

Writer - ಬೀಜಿಂಗ್

contributor

Editor - ಬೀಜಿಂಗ್

contributor

Similar News