×
Ad

ದಕ್ಷಿಣ ಆಫ್ರಿಕ: ಜಾಕೋಬ್ ಝಮಾಗೆ ಜೈಲು ವಿರೋಧಿಸಿ ಹಿಂಸಾಚಾರ, ಮೃತರ ಸಂಖ್ಯೆ 32ಕ್ಕೆ

Update: 2021-07-13 19:49 IST
photo: twitter/@twistedcat

ಜೊಹಾನ್ಸ್ಬರ್ಗ್ (ದಕ್ಷಿಣ ಆಫ್ರಿಕ), ಜು. 13: ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ಜಾಕೋಬ್ ಝುಮಾರ ಜೈಲುಶಿಕ್ಷೆಯನ್ನು ವಿರೋಧಿಸಿ ದಕ್ಷಿಣ ಆಫ್ರಿಕದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಇನ್ನು 22 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಇದರೊಂದಿಗೆ ಈವರೆಗೆ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿದೆ.

ಈ ಪೈಕಿ 26 ಸಾವು ಕ್ವಝುಲು-ನಾಟಲ್ ಪ್ರಾಂತ್ಯವೊಂದರಲ್ಲೇ ಸಂಭವಿಸಿದೆ ಎಂದು ಪ್ರಾಂತದ ಪ್ರೀಮಿಯರ್ ಸಿಹ್ಲೆ ಝಿಕಾಲಾಲ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದಕ್ಕೂ ಒಂದು ದಿನ ಮೊದಲು ಗ್ವಾಟೆಂಗ್ ಪ್ರಾಂತದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

‘‘ಪ್ರತಿಭಟನೆಯ ವೇಳೆ ನಡೆದ ನೂಕುನಗ್ಗಲಿನಲ್ಲಿ ಕಾಲ್ತುಳಿತಕ್ಕೊಳಗಾಗಿ ಈ ಜನರು ಮೃತಪಟ್ಟಿದ್ದಾರೆ’’ ಎಂದು ಅವರು ಹೇಳಿದರು. ದೇಶದ ಅಧ್ಯಕ್ಷನಾಗಿ ತನ್ನ ಒಂಬತ್ತು ವರ್ಷಗಳ ಅವಧಿಯಲ್ಲಿ ನಡೆಯಿತೆನ್ನಲಾದ ಭ್ರಷ್ಟಾಚಾರ ಕುರಿತ ತನಿಖೆಯನ್ನು ಮಾನ್ಯ ಮಾಡಲು ನಿರಾಕರಿಸಿರುವುದಕ್ಕಾಗಿ ಝುಮಾಗೆ 15 ತಿಂಗಳ ಜೈಲು ಶಿಕ್ಷೆಯನ್ನು ಕಳೆದ ವಾರ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News