×
Ad

ಚೀನಾ ಬಗ್ಗೆ ಚರ್ಚಿಸಲು ಅವಕಾಶ ನಿರಾಕರಣೆ: ರಕ್ಷಣಾ ಸಮಿತಿ ಸಭೆಯಿಂದ ಹೊರ ನಡೆದ ರಾಹುಲ್ ಗಾಂಧಿ

Update: 2021-07-14 21:19 IST

ಹೊಸದಿಲ್ಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ  ಅವರ ಕೆಲವು ಸಂಸದೀಯ ಸಹೋದ್ಯೋಗಿಗಳು ಚೀನಾದೊಂದಿಗಿನ ಗಡಿ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ನೀಡದ ಕಾರಣ ರಕ್ಷಣಾ ಸಮಿತಿ ಸಭೆಯಿಂದ ಹೊರ ನಡೆದರು ಎಂದು ಮೂಲಗಳು ತಿಳಿಸಿವೆ.

ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿತ್ತು. ರಾಹುಲ್  ಗಾಂಧಿ ಹಾಗೂ  ಕಾಂಗ್ರೆಸ್ ಸಂಸದರು ಚೀನಾದೊಂದಿಗೆ ಗಡಿರೇಖೆ ಕುರಿತು ಚರ್ಚಿಸಲು ಮಾಡಿದ ಮನವಿಯನ್ನು ನಿರಾಕರಿಸಲಾಯಿತು. ನಂತರ ಅವರು ರಕ್ಷಣಾ ಸಮಿತಿ ಸಭೆಯಿಂದ ಹೊರನಡೆದರು. ಅವರ ಪಕ್ಷದ ಸಂಸದರು ರಾಹುಲ್ ರನ್ನು ಅನುಸರಿಸಿದರು ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸತ್ತಿನ ಕಾರ್ಯತಂತ್ರ ಸಭೆಯಲ್ಲಿ ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚೀನಾದೊಂದಿಗೆ ಗಡಿ ಸಮಸ್ಯೆಯನ್ನು ಎತ್ತಲು ಕಾಂಗ್ರೆಸ್ ನಿರ್ಧರಿಸಿದೆ.

ಸಂಸತ್ತಿನೊಳಗೆ ಕಲಾಪ ನಿರ್ವಹಣೆ ಹಾಗೂ  ಕಾರ್ಯತಂತ್ರದ ಬಗ್ಗೆ ಮಿತ್ರಪಕ್ಷಗಳೊಂದಿಗೆ ಸಮನ್ವಯ ಸಾಧಿಸಲು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂಗಾರು ಅಧಿವೇಶನದಲ್ಲಿ ಚೀನಾದೊಂದಿಗಿನ ಗಡಿ ಸಮಸ್ಯೆಗಳ ಹೊರತಾಗಿ ಇಂಧನ ಬೆಲೆ ಏರಿಕೆ ಸಮಸ್ಯೆ, ಹಣದುಬ್ಬರ, ಲಸಿಕೆ ಕೊರತೆ, ನಿರುದ್ಯೋಗ ಹಾಗೂ  ರಫೇಲ್ ಒಪ್ಪಂದದ ವಿವಾದದ ಬಗ್ಗೆ ಧ್ವನಿ ಎತ್ತಲು ಕಾಂಗ್ರೆಸ್ ಬಯಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News