ಜಮ್ಮು ಕಾಶ್ಮೀರದಲ್ಲಿ ಶಂಕಿತ ಡ್ರೋನ್ ಹಾರಾಟ: ಗಡಿ ಭದ್ರತಾ ಪಡೆಯಿಂದ ಗುಂಡಿನ ದಾಳಿ

Update: 2021-07-14 17:36 GMT

ಜಮ್ಮು, ಜು. 14: ಜಮ್ಮು ಹಾಗೂ ಕಾಶ್ಮೀರದ ಅರ್ನಿಯಾ ವಲಯದ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಮುಂಚೂಣಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಹಾರಾಡುತ್ತಿದ್ದ ಶಂಕಿತ ಡ್ರೋನ್ಗೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಗುಂಡು ಹಾರಿಸಿದ್ದಾರೆ. 

‘‘ಜುಲೈ 13 ಹಾಗೂ 14ರ ಮಧ್ಯೆ ರಾತ್ರಿಯಲ್ಲಿ ಅರ್ನಿಯಾ ವಲಯದಲ್ಲಿ ರಾತ್ರಿ 9.52ಕ್ಕೆ 200 ಮೀಟರ್ ಎತ್ತರದಲ್ಲಿ ಕೆಂಪು ಬೆಳಕು ಹೊಳೆಯುವುದನ್ನು ಬಿಎಸ್ಎಫ್ ಗಮನಿಸಿತ್ತು. ಕೂಡಲೇ ಜಾಗೃತವಾದ ಬಿಎಸ್ಎಫ್ ಹೊಳೆಯುವ ಕೆಂಪು ಬೆಳಕಿನತ್ತ ಗುಂಡು ಹಾರಿಸಿತು’’ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಅನಂತರ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಏನೂ ಕಂಡು ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಜಮ್ಮುವಿನಲ್ಲಿರುವ ಭಾರತೀಯ ವಾಯು ಪಡೆಯ ನೆಲೆ ಮೇಲೆ ಡ್ರೋನ್ ದಾಳಿ ನಡೆದ ಬಳಿಕ ಜಮ್ಮುವಿನಲ್ಲಿ ಆಗಾಗ ಶಂಕಿತ ಡ್ರೋನ್‌ ಗಳು ಕಂಡು ಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News