ಈ ಚಾಟಿ ಏಟಿನ ಅಗತ್ಯವಿತ್ತು

Update: 2021-07-16 18:12 GMT

ಮಾನ್ಯರೇ,

ಕಾನೂನುಗಳು ಒಬ್ಬ ಅಪರಾಧಿಗೆ ಶಿಕ್ಷೆ ಕೊಡಲು ಎಷ್ಟು ಪ್ರಮುಖವಾಗಿವೆಯೋ ಹಾಗೆಯೇ ಒಬ್ಬ ನಿರಪರಾಧಿಗೆ ಶಿಕ್ಷೆ ಆಗುವುದನ್ನು ತಪ್ಪಿಸುವಲ್ಲಿಯೂ ಅಷ್ಟೇ ಪ್ರಾಮುಖ್ಯತೆ ಪಡೆದಿವೆ. ಆದರೆ ಕಾನೂನಿನ ಮತ್ತು ಸಂವಿಧಾನದ ಮೂಲ ಆಶಯವನ್ನೇ ಈಗ ಮರೆಯುತ್ತಿರುವುದು ಗಮನಿಸಬೇಕಾದ ಅಂಶ. 75 ವರ್ಷಗಳ ಹಿಂದೆ ವಸಾಹತುಶಾಹಿಗಳು ಸಾಮಾನ್ಯ ಜನರ ಪ್ರತಿಭಟನೆಗಳನ್ನು ಹತ್ತಿಕ್ಕಿಲು ಬಳಸುತ್ತಿದ್ದ ಕಾನೂನು, ನಮಗೆ ಸ್ವಾತಂತ್ರ ದೊರೆತು ಇಷ್ಟು ವರ್ಷವಾದರೂ ನಮ್ಮನ್ನಾಳಿಕೊಂಡು ಬರುತ್ತಿರುವ ಸರಕಾರಗಳು, ಒಬ್ಬ ವ್ಯಕ್ತಿಯು ಅಪರಾಧಿ ಎಂದು ತೀರ್ಮಾನವಾಗುವ ಮೊದಲೇ ಅವನನ್ನು ಶಿಕ್ಷೆಗೊಳಪಡಿಸಿ ಸಾವಿಗೆ ದೂಡುತ್ತಿರುವುದು ಆ ವ್ಯಕ್ತಿಯ ಜೀವಿಸುವ ಹಕ್ಕು ಕಸಿದುಕೊಂಡಂತೆಯೇ. ಇಂತಹ ವಸಾಹತುಶಾಹಿಗಳ ಧೋರಣೆ ತೋರಿಸುತ್ತಿರುವುದು ಈಗಿನ ಕೇಂದ್ರ ಸರಕಾರಕ್ಕೂ ಶೋಭೆ ತರುವಂತದ್ದಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ನ್ಯಾಯಾಂಗದ ಈ ಕಳವಳದಿಂದಾಗಿ ದೇಶದ ಜನತೆಗೆ ನ್ಯಾಯಾಂಗದ ಮೇಲೆ ಮತ್ತೆ ಭರವಸೆ ಮೂಡಿದೆ.

Writer - -ರೇಣುಕಾ ಹನ್ನುರ, ಕಲಬುರಗಿ

contributor

Editor - -ರೇಣುಕಾ ಹನ್ನುರ, ಕಲಬುರಗಿ

contributor

Similar News