ದೇಶದ 250ಕ್ಕೂ ಅಧಿಕ ನಗರಗಳಲ್ಲಿ ಪೆಟ್ರೋಲ್ ದರ 100 ರೂ.ದಾಟಿರುವುದು ಊಹೆಗೂ ನಿಲುಕದ್ದು: ಸಚಿನ್ ಪೈಲಟ್

Update: 2021-07-17 06:55 GMT

ಡೆಹ್ರಾಡೂನ್: ರಾಷ್ಟ್ರದ 250ಕ್ಕೂ ಹೆಚ್ಚು ನಗರಗಳಲ್ಲಿ ಪೆಟ್ರೋಲ್ ದರ 100 ರೂ. ದಾಟಿದೆ ಎನ್ನುವುದು ಕಲ್ಪನೆಗೆ ನಿಲುಕದ್ದಾಗಿದೆ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಈ ವರ್ಷವೊಂದರಲ್ಲಿ ಕನಿಷ್ಠ 66 ಬಾರಿ ಪೆಟ್ರೋಲ್ ದರವನ್ನು ಕೇಂದ್ರ ಸರಕಾರ ಹೆಚ್ಚಿಸಿದೆ. ಕೇಂದ್ರ ಸರಕಾರವೇ ನೀಡಿರುವ ಮಾಹಿತಿ ಪ್ರಕಾರ ಕಳೆದ 7 ವರ್ಷಗಳಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆಯನ್ನು ಶೇಕಡಾ 250ರಷ್ಟು ಹೆಚ್ಚಿಸಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು ಶೇ.800ರಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಕೇಂದ್ರ ಸರಕಾರಕ್ಕೆ ಬಂದಿರುವ ಆದಾಯ 25 ಲಕ್ಷ ಕೋಟಿ ರೂ. ಇದು ಸಾಮಾನ್ಯ ಜನರ ಜೇಬಿನ ಮೇಲಿನ ನೇರ ದಾಳಿಯಾಗಿದೆ'' ಎಂದು ಡೆಹ್ರಾಡೂನ್  ನಲ್ಲಿ ಪೈಲಟ್ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News