×
Ad

ಮಧ್ಯಪ್ರದೇಶದ ಸಾಗರ್‌ನಲ್ಲಿ ತರಬೇತುದಾರ ವಿಮಾನ ಅಪಘಾತ

Update: 2021-07-17 19:07 IST

ಭೋಪಾಲ್: ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಧನಾ ಏರ್‌ಸ್ಟ್ರಿಪ್‌ನಲ್ಲಿ ಶನಿವಾರ ರನ್ ವೇಯಲ್ಲಿ  ತರಬೇತುದಾರ ವಿಮಾನವೊಂದು ಸ್ಕಿಡ್ ಆಗಿದ್ದು ವಿಮಾನದಲ್ಲಿ ತರಬೇತಿ ಪೈಲಟ್ ಮಾತ್ರ ಇದ್ದರು. ಅವರಿಗೆ ಯಾವುದೇ ಗಾಯವಾಗದೆ  ಸುರಕ್ಷಿತವಾಗಿದ್ದಾರೆ  ಎಂದು ಪೊಲೀಸರು ತಿಳಿಸಿದ್ದಾರೆ.

ಸೆಸ್ನಾ 172 ಎಂಬ ವಿಮಾನವು ಖಾಸಗಿ ವಿಮಾನಯಾನ ಸಂಸ್ಥೆಯಾದ ಚೈಮ್ಸ್ ಏವಿಯೇಷನ್‌ಗೆ ಸೇರಿದ್ದು, ಕಳೆದ ವರ್ಷ ಅದರ ಒಂದು ವಿಮಾನ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಇಬ್ಬರು ಸಾವನ್ನಪ್ಪಿದ ನಂತರ ಏರ್‌ಸ್ಟ್ರಿಪ್ ಬಳಸುವುದನ್ನು ನಿಷೇಧಿಸಲಾಗಿತ್ತು. ಆದರೆ ನಂತರ ನಿಷೇಧವನ್ನು ತೆಗೆದುಹಾಕಲಾಯಿತು.

ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 22 ವರ್ಷದ ತರಬೇತಿ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಚೈಮ್ಸ್ ಏವಿಯೇಷನ್‌ನ ಸ್ಥಳೀಯ ಆಡಳಿತಾಧಿಕಾರಿ ರಾಹುಲ್ ಶರ್ಮಾ ಹೇಳಿದ್ದಾರೆ.

ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಶುಕ್ರವಾರ ತರಬೇತಿದಾರ ವಿಮಾನ ಅಪಘಾತ ಕ್ಕೀಡಾದ ಬೆನ್ನಿಗೇ ಈ ಘಟನೆ ನಡೆದಿದ್ದು, ಜಲಗಾಂವ್ ನಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದರು.

ಕಳೆದ ವರ್ಷ ಮಾರ್ಚ್‌ನಲ್ಲಿ ಮಧ್ಯಪ್ರದೇಶ ಸರಕಾರವು 2020 ರ ಜನವರಿ 3 ರಂದು ಚೈಮ್ಸ್ ಏವಿಯೇಷನ್ ಗೆ ಸೇರಿರುವ ತರಬೇತುದಾರ ವಿಮಾನವೊಂದು ಅಪಘಾತಕ್ಕೀಡಾದ ನಂತರ ಚೈಮ್ಸ್ ಏವಿಯೇಷನ್ ಅನ್ನು ಧಾನಾ ಏರ್‌ಸ್ಟ್ರಿಪ್ ಬಳಸುವುದನ್ನು ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News