ಸಂಸತ್ ಎದುರು ಉದ್ದೇಶಿತ ಪ್ರತಿಭಟನೆ: ರೈತರೊಂದಿಗೆ ಚರ್ಚಿಸಿದ ದಿಲ್ಲಿ ಪೊಲೀಸರು

Update: 2021-07-18 16:38 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.18: ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳ ವಾಪಸಾತಿಗಾಗಿ ಪ್ರತಿಭಟನಾನಿರತ ರೈತರು ಸೋಮವಾರದಿಂದ ಆರಂಭಗೊಳ್ಳಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದ ಸಂದರ್ಭದಲ್ಲಿ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ರವಿವಾರ ಸಿಂಘು ಗಡಿಯಲ್ಲಿ ಧರಣಿ ಕುಳಿತಿರುವ ರೈತರನ್ನು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಚರ್ಚಿಸಿದರು.

ರೈತರ ಜಾಥಾ ಸಂಸತ್ ಭವನಕ್ಕೆ ತೆರಳುವ ಮಾರ್ಗಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ ಟಿಕಾಯತ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ವರ್ಷದ ಜನವರಿ 26ರಂದು ‘ಟ್ರಾಕ್ಟರ್ ರ್ಯಾಲಿ’ಗೆ ಮುನ್ನ ಉಭಯ ಪಕ್ಷಗಳ ನಡುವಿನ ಸರಣಿ ಸಭೆಗಳ ಬಳಿಕ ಇಂದಿನದು ರೈತರು ಮತ್ತು ಪೊಲೀಸರ ನಡುವಿನ ಎರಡನೇ ಮಾತುಕತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News