ಕೆಲವು ಅದಾನಿ ಗ್ರೂಪ್ ಕಂಪನಿಗಳ ತನಿಖೆ ನಡೆಸಲಾಗುತ್ತಿದೆ: ಸಂಸತ್ತಿನಲ್ಲಿ ತಿಳಿಸಿದ ಸಚಿವ ಪಂಕಜ್ ಚೌಧರಿ

Update: 2021-07-19 13:30 GMT

ಚೆನ್ನೈ: ನಿಯಮಗಳನ್ನು ಪಾಲಿಸದ ಕಾರಣ ಕೆಲವು ಅದಾನಿ ಗ್ರೂಪ್ ಕಂಪನಿಗಳ ಬಗ್ಗೆ ಸೆಬಿ  ಹಾಗೂ  ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಕಿರಿಯ ಹಣಕಾಸು ಸಚಿವರು ಸೋಮವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಸೆಬಿ ಹಾಗೂ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ)  ಯಾವಾಗ ತನಿಖೆಯನ್ನು ಆರಂಭಿಸಿವೆ ಎಂದು ತಕ್ಷಣ ಸ್ಪಷ್ಟವಾಗಿಲ್ಲ.

ಯಾವ ಕಂಪನಿಗಳು ಭಾಗಿಯಾಗಿವೆ ಎಂದು ಸಚಿವ ಪಂಕಜ್ ಚೌಧರಿ ಹೆಸರಿಸಲಿಲ್ಲ.

"ಸೆಬಿ ನಿಬಂಧನೆಗಳ ಅನುಸರಣೆಗೆ ಸಂಬಂಧಿಸಿದಂತೆ ಸೆಬಿ ಕೆಲವು ಅದಾನಿ ಗ್ರೂಪ್ ಕಂಪನಿಗಳ ಬಗ್ಗೆ ತನಿಖೆ ನಡೆಸುತ್ತಿದೆ. ಇದಲ್ಲದೆ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ) ಅದಾನಿ ಸಮೂಹಕ್ಕೆ ಸೇರಿದ ಕೆಲವು ಸಂಸ್ಥೆಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ" ಎಂದು ಚೌಧರಿ ಹೇಳಿದರು.

ಅದಾನಿ ಗ್ರೂಪ್ ನ ವಕ್ತಾರರು ಪ್ರತಿಕ್ರಿಯೆಯನ್ನು ಕೋರಿದ ಇ-ಮೇಲ್‌ಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News