ಪುದುಚೇರಿ: ಕೇಂದ್ರಕ್ಕೆ ನಿಯೋಗ ಕರೆದೊಯ್ಯುವಂತೆ ಎಐಎಡಿಎಂಕೆಯಿಂದ ಮುಖ್ಯಮಂತ್ರಿಗೆ ಮನವಿ

Update: 2021-07-20 16:45 GMT

ಪುದುಚೇರಿ, ಜು. 20: ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಲು ಸರ್ವ ಪಕ್ಷಗಳ ನಿಯೋಗ ಕರೆದೊಯ್ಯುವಂತೆ ಹಾಗೂ ಕರ್ನಾಟಕ ಕಾವೇರಿ ನದಿಗುಂಟ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವುದನ್ನು ತಡೆಯಲು ಕೇಂದ್ರ ಸರಕಾರವನ್ನು ಆಗ್ರಹಿಸುವಂತೆ ಪುದುಚೇರಿಯಲ್ಲಿ ಎಐಎಡಿಎಂಕೆ ಸೋಮವಾರ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರನ್ನು ಆಗ್ರಹಿಸಿದೆ. ‌

ಈ ಮನವಿಯನ್ನು ಎಐಎಡಿಎಂಕೆಯ ಮಾಜಿ ಶಾಸಕ ಹಾಗೂ ಪಕ್ಷದ ಪುದುಚೇರಿ ಘಟಕ (ಪೂರ್ವ ಜಿಲ್ಲೆ) ದ ಕಾರ್ಯದರ್ಶಿ ಎ. ಅನ್ಬಳಗನ್ ಅವರು ಪತ್ರವನ್ನು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಖಾತೆಯ ಸಚಿವರೂ ಆಗಿರುವ ಕೆ. ಲಕ್ಷ್ಮೀನಾರಾಯಣ ಅವರಿಗೆ ಪ್ರತ್ಯೇಕವಾಗಿ ಸೋಮವಾರ ಸಲ್ಲಿಸಿದ್ದಾರೆ. ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅಸ್ತಿತ್ವಕ್ಕೆ ಬಂದರೆ, ನದಿ ಹರಿಯುವ ರಾಜ್ಯಗಳಲ್ಲಿ ಒಂದಾದ ಪುದುಚೇರಿಯಲ್ಲಿ ನೀರು ಹರಿದು ಕಾರೈಕಲ್ ವಲಯದ ರೈತರ ಬೆಳೆ ಹಾನಿ ಉಂಟಾಗಲಿದೆ ಎಂದರು. 

ತಮಿಳುನಾಡು ಹಾಗೂ ಕಾರೈಕಲ್ನ ರೈತರ ಹಿತಾಸಕ್ತಿಗಳು ಅಪಾಯದಲ್ಲಿವೆ ಎಂದು ಅನ್ಬಳಗನ್ ಹೇಳಿದರು. ಅಣೆಕಟ್ಟು ಯೋಜನೆಯನ್ನು ಮುಂದುವರಿಸದಂತೆ ಕರ್ನಾಟಕವನ್ನು ತಡೆಯಲು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಲು ನಿಯೋಗವನ್ನು ಸಿದ್ಧಪಡಿಸುವಂತೆ ಅವರು ಸರಕಾರವನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News