ಭಾರತದ ಆರ್ಥಿಕ ಪ್ರಗತಿದರ ಶೇ.10ಕ್ಕಿಳಿಸಿದ ಎಡಿಬಿ

Update: 2021-07-20 16:59 GMT

ಹೊಸದಿಲ್ಲಿ, ಜ.20: 2021-22ನೇ ಸಾಲಿನ ವಿತ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ.10ಕ್ಕಿಳಿಸಿದೆ. ಎಡಿಬಿಯು ಕಳೆದ ಏಪ್ರಿಲ್ನಲ್ಲಿ ಬಿಡುಗಡೆಗೊಳಿಸಲಾದ ವರದಿಯಲ್ಲಿ ಈ ಸಾಲಿನಲ್ಲಿ ಶೇ.11ರಷ್ಟು ಆರ್ಥಿಕ ಬೆಳವಣಿಗೆಯನ್ನು ಭಾರತ ಸಾಧಿಸಲಿದೆಯೆಂದು ಅಂದಾಜಿಸಲಾಗಿತ್ತು.
  ‌
ಆದರೆ 2022-23ನೇ ವಿತ್ತ ವರ್ಷದ ಅವಧಿಯಲ್ಲಿ ಭಾರತದ ಜನಸಂಖ್ಯೆಯ ಬಹುತೇಕ ಭಾಗವು ಲಸಿಕೀಕರಣಗೊಳಗಾಗಲಿದ್ದು, ಆ ವೇಳೆಗೆ ಆರ್ಥಿಕ ಚಟುವಟಿಕೆ ಸಹಜ ಸ್ಥಿತಿಗೆ ಬರಲಿದೆ ಎಂದು ಎಡಿಬಿ ವರದಿ ಹೇಳಿದೆ.
  
2020-21ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಆರ್ಥಿಕ ಬೆಳವಣಿಗೆಯು ಶೇ.1.6ರಷ್ಟು ಚೇತರಿಕೆಯಾಗಿದೆಯೆಂದು ಅದು ತಿಳಿಸಿದೆ.
ಏಶ್ಯದ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಆರ್ಥಿಕ ಚೇತರಿಕೆಯಹಾದಿಯಲ್ಲಿವೆ ಎಂದು ಏಶ್ಯ ಅಭಿವೃದ್ಧಿ ಬ್ಯಾಂಕ್ ತಿಳಿಸಿದೆ. ಈ ಹಣಕಾಸು ವರ್ಷದಲ್ಲಿ ಏಶ್ಯದ ಅಭಿವೃದ್ಧಿಶೀಲ ರಾಷ್ಟ್ರಗಳ ಒಟ್ಟು ನಿರೀಕ್ಷಿತ ಪ್ರಗತಿ ದರದಲ್ಲಿ ಏಡಿಬಿ ತುಸು ಏರಿಕೆ ಮಾಡಿದ್ದು, ಶೇ.7.2ರಿಂದ ಶೇ.7.3ಕ್ಕೇರಿಸಿದೆ.
 
2021ರ ಮಾರ್ಚ್ನಿಂದ ಜೂನ್ ವರೆಗೆ ದಕ್ಷಿಣ ಏಶ್ಯದಲ್ಲಿ ಕೊರೋನ ಎರಡನೆ ಅಲೆಯ ಆರ್ಭಟದಿಂದಾಗಿ ಆ ಪ್ರಾಂತದ ಆರ್ಥಿಕ ಬೆಳವಣಿಗೆಯಲ್ಲಿ ಕುಸಿತವುಂಟಾಗಿತ್ತು. ಕೊರೋನ ಎರಡನೆ ಅಲೆಯಿಂದ ಉಂಟಾಗಿರುವ ಪ್ರತಿಕೂಲ ಆರ್ಥಿಕ ಪರಿಣಾಮವು ಸೀಮಿತವಾಗಿರುವ ನಿರೀಕ್ಷೆಯಿದೆ. ಸಾಂಕ್ರಾಮಿಕತೆ ಹಾಗೂ ನಿರ್ಬಂಧ ಕ್ರಮಗಳಿಗೆ ಉದ್ಯಮಗಳು ಹಾಗೂ ಗ್ರಾಹಕರು ಈಗ ಹೆಚ್ಚು ಹೊಂದಿಕೊಂಡು ಹೋಗುತ್ತಿದ್ದಾರೆ ಎಂದು ಎಡಿಬಿ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News