ದೆಹಲಿ ಡಿಸಿಪಿ ವಿರುದ್ಧ ಎಫ್‍ಐಆರ್: ಕಾರಣವೇನು ಗೊತ್ತೇ?

Update: 2021-07-21 04:23 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿದಂತೆ ಎಎಸ್‍ಐಯೊಬ್ಬರ ಕುಟುಂಬದ ಜತೆ ವಾಗ್ವಾದ ನಡೆದ ಆರೋಪದಲ್ಲಿ ದೆಹಲಿ ಪೊಲೀಸರು ಡಿಸಿಪಿ ಮತ್ತು ಆತನ ಪತ್ನಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಡಿಸಿಪಿ ಪತ್ನಿ ಎಎಸ್‍ಐ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.

ನ್ಯೂ ಪೊಲೀಸ್ ಲೈನ್ಸ್ ನ ಕಿಂಗ್ಸ್ ವೇ ಕ್ಯಾಂಪ್‍ನಲ್ಲಿ ಇಬ್ಬರೂ ಅಕ್ಕಪಕ್ಕದಲ್ಲಿ ವಾಸವಿದ್ದರು. ಎಎಸ್‍ಐ ಪುತ್ರಿ ಮುಖರ್ಜಿ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ಡಿಸಿಪಿ ಹಾಗೂ ಆತನ ಪತ್ನಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ವಾಹನ ನಿಲ್ಲಿಸುವ ಜಾಗದ ವಿಷಯದಲ್ಲಿ ಉಂಟಾದ ಜಗಳದ ವೇಳೆ ಡಿಸಿಪಿ ಹಾಗೂ ಪತ್ನಿ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.

ಡಿಸಿಪಿ ದಂಪತಿ ತನ್ನ ಸಹೋದರಿಯತ್ತ ಬಾಗಿಲಿನ ಬೀಗ ಎಸೆದಿದ್ದಾರೆ ಎಂದು ಮಹಿಳೆ ಆಪಾದಿಸಿದ್ದಾರೆ. "ನಮ್ಮ ಮನೆಯ ಹೊರಗಿನ ದೀಪವನ್ನು ಬ್ಯಾಟಿನಿಂದ ಪುಡಿ ಮಾಡಿದ್ದಾರೆ. ಈ ಕೃತ್ಯ ನಿಲ್ಲಿಸುವಂತೆ ಕೇಳಿಕೊಂಡಾಗ ಮನೆಯೊಳಕ್ಕೆ ನುಗ್ಗಿ ನನಗೆ ಬ್ಯಾಟ್‍ನಿಂದ ಹಲ್ಲೆ ನಡೆಸಿದರು" ಎಂದು ಎಎಸ್‍ಐ ಪುತ್ರಿ ದೂರಿನಲ್ಲಿ ವಿವರಿಸಿದ್ದಾರೆ.

ಎಎಸ್‍ಐ ಪುತ್ರಿ ಹಾಗೂ ಪತ್ನಿಯ ವಿರುದ್ಧ ಡಿಸಿಪಿ ಪತ್ನಿ ದೂರು ನೀಡಿದ್ದು, ಇಬ್ಬರೂ ತನಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾಗಿ ಆಪಾದಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಡಿಸಿಪಿ ಸಂವಹನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News