ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿಲ್ಲಎಂಬ ಸರಕಾರದ ಹೇಳಿಕೆ ಬೆನ್ನಿಗೇ ಆಕ್ರೋಶ ಹೊರಹಾಕಿದ ಸಂತ್ರಸ್ತರು

Update: 2021-07-21 16:14 GMT
ಸಾಂದರ್ಭಿಕ ಚಿತ್ರ

ಲಕ್ನೊ: ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸಿದ ಕೋವಿಡ್ -19 ಸಾವುಗಳ ಬಗ್ಗೆ ಯಾವುದೇ ರಾಜ್ಯ ಸರಕಾರ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದ ಮರುದಿನ ಉತ್ತರ ಪ್ರದೇಶದ ಲಕ್ನೋದಲ್ಲಿ ಹಲವಾರು ಜನರು  ಕೊರೋನದ ಎರಡನೇ ಅಲೆಯಲ್ಲಿ ಉಸಿರಾಡುವ ಅನಿಲದ ಬಿಕ್ಕಟ್ಟು ತಮ್ಮ  ಕುಟುಂಬ ಸದಸ್ಯರ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ ಎಂದು India Today ವರದಿ ಮಾಡಿದೆ.

ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಕೋವಿಡ್ -19 ನಿಂದಾಗಿ ಸಾವನ್ನಪ್ಪಿದ ತಮ್ಮ ಪ್ರೀತಿಪಾತ್ರರ ಅಗಲಿಕೆಯ ನೋವು ತಮ್ಮನ್ನು ಇನ್ನೂ ಕಾಡುತ್ತಿದೆ ಎಂದು ಕುಟುಂಬಗಳು ತಿಳಿಸಿವೆ.

ಕೊರೋನವೈರಸ್ ಸಾಂಕ್ರಾಮಿಕ ರೋಗದ ರಾಷ್ಟ್ರವ್ಯಾಪಿ ಎರಡನೇ ಅಲೆಯಲ್ಲಿ ಕೋವಿಡ್ -19 ಗೆ ತನ್ನ ತಾಯಿಯನ್ನು ಕಳೆದುಕೊಂಡ ದುಃಖದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ ಎಂದು ಲಕ್ನೋದ ಸುಭಾಷ್ ಮಾರ್ಗ ಪ್ರದೇಶದ ನಿವಾಸಿ 17 ವರ್ಷದ ಆರುಶ್ ರಸ್ತೋಗಿ ಹೇಳಿದ್ದಾರೆ. ಆಮ್ಲಜನಕದ ಕೊರತೆಯಿಂದಾಗಿ ತನ್ನ ತಾಯಿ ಕೋವಿಡ್ -19 ಯುದ್ಧದಲ್ಲಿ ಸೋತರು ಎಂದು ಅವರು ಹೇಳಿದರು.

ನಮ್ಮ ಪರಿಸರದ ಖಾಸಗಿ ಆಸ್ಪತ್ರೆಗಳು ಆಮ್ಲಜನಕದ ಕೊರತೆಯಿಂದಾಗಿ ತಾಯಿಯನ್ನುದಾಖಲಿಸಿಕೊಳ್ಳಲು ನಿರಾಕರಿಸಿದ್ದವು ಎಂದು ರಸ್ತೋಗಿ ಹೇಳಿದರು.

ವೈದ್ಯಕೀಯ ಕಿಟ್ ಹಾಗೂ  ಆಕ್ಸಿಜನ್ ಸಿಲಿಂಡರ್ ಹುಡುಕುತ್ತಾ ಸುತ್ತಾಡಬೇಕಾಯಿತು ಎಂದು ಆರುಶ್ ತಂದೆ ರಾಜೇಶ್ ರಸ್ತೋಗಿ ಹೇಳಿದ್ದಾರೆ. ಆಮ್ಲಜನಕದ ಕೊರತೆ ಇಲ್ಲದಿದ್ದರೆ ತನ್ನ ಪತ್ನಿ ಸುಧಾ ಬದುಕುಳಿಯುತ್ತಿದ್ದರು ಎಂದು ಹೇಳಿದ್ದಾರೆ.

ಲಕ್ನೋದ ಬಕ್ಷಿ ಕಾ ತಲಾಬ್ ಪ್ರದೇಶದ ಮತ್ತೊಂದು ಕುಟುಂಬವು ಅದರ ಸದಸ್ಯರ ಸಾವಿಗೆ ವೈದ್ಯಕೀಯ ಆಮ್ಲಜನಕದ ಕೊರತೆ ಕಾರಣ ಎಂದು ಆರೋಪಿಸಿದೆ. ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡಿದ್ದೇವೆ ಎಂದು ಸೀಮಾ (30) ಹಾಗೂ  ಕುಶಾ ಯಾದವ್ (40) India Today ಗೆ ತಿಳಿಸಿದ್ದಾರೆ.

ಕೋವಿಡ್ -19 ಬಳಲುತ್ತಿದ್ದ ಪತಿಗೆ ಉಸಿರಾಟದ ಸಮಸ್ಯೆ ಇತ್ತು. ಅವರಿಗೆ ಆಮ್ಲಜನಕದ  ಅಗತ್ಯವಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತನ್ನ ಪತಿಗೆ ಸರಿಯಾದ ಚಿಕಿತ್ಸೆ ದೊರೆತಿಲ್ಲ ಹಾಗೂ  ಆಮ್ಲಜನಕದ ಬಿಕ್ಕಟ್ಟಿನಿಂದ ಪತಿ ಸಾವನ್ನಪ್ಪಿದ್ದರು ಎಂದು ಸೀಮಾ ಹೇಳಿದ್ದಾರೆ.

ಎಪ್ರಿಲ್ 25 ರಿಂದ ಮೇ 1 ರವರೆಗೆ ತನ್ನ ಕುಟುಂಬದ ಹಲವು ಸದಸ್ಯರನ್ನು ಕಳೆದುಕೊಂಡೆ . ಅವರೆಲ್ಲರೂ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಎಂದು ಕುಶಾ ಯಾದವ್ ಹೇಳಿದ್ದಾರೆ.

"ಆಮ್ಲಜನಕದ ಕೊರತೆಯಿಲ್ಲ ಎಂದು ಸರಕಾರ ಹೇಳಿದೆ.ಆದರೆ ನಮ್ಮ ಮನೆಯಲ್ಲಿ ಯಾರನ್ನಾದರೂ ಕೇಳಿ ಅಲ್ಲಿ ದುಡಿಯುವವರೇ ಇಲ್ಲವಾಗಿದೆ. ನಮ್ಮ ಕುಟುಂಬದವರು ಸಾವನ್ನಪ್ಪಿದ ಕಾರಣ ನಮಗೆ ಯಾವುದೇ ಸಹಾಯ ದೊರೆತಿಲ್ಲ "ಎಂದು ಕುಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News