ರೈತರನ್ನು ಬೆಂಬಲಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2021-07-22 06:23 GMT

ಹೊಸದಿಲ್ಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪಕ್ಷದ ಇತರ ಸಂಸದರು ಸಂಸತ್ ಭವನದಲ್ಲಿ ರೈತರಿಗೆ ಬೆಂಬಲ ಸೂಚಿಸಿ ಗುರುವಾರ ಬೆಳಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲು ರೈತರು  ಸಿಂಘು ಗಡಿಯಲ್ಲಿ ಜಮಾಯಿಸಿದ್ದು, ಬಸ್ ಏರಿ ಜಂತರ್ ಮಂತರ್ ನತ್ತ ಆಗಮಿಸುತ್ತಿದ್ದಾರೆ. ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪೊಲೀಸರು ಹಾಗೂ ಅರೆ ಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಮುರಿಯುವ ತನಕ ಪ್ರತಿದಿನ 200 ರೈತರು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಸಿಂಘು ಗಡಿ ತಲುಪಿದ ಬಿಕೆಯು ನಾಯಕ ರಾಕೇಶ್ ಟಿಕಾಯತ್, "8 ತಿಂಗಳುಗಳಿಂದ ಹೋರಾಟ ನಡೆಯುತ್ತಿದೆ.  ನಮ್ಮ ಪಂಚಾಯತ್ 8 ತಿಂಗಳುಗಳಿಂದ ಶಾಂತಿಯುತವಾಗಿ ನಡೆಯುತ್ತಿದೆ.  ಸರಕಾರದ ಮುಂದೆ ನಮ್ಮ ಅಂಶವನ್ನು ಇಡುತ್ತೇವೆ. ಜಂತರ್ ಮಂತರ್ ನಲ್ಲಿ ಪಂಚಾಯತ್ ನಡೆಯಲಿದೆ. ಇದನ್ನು ಕಿಸಾನ್ ಸಂಸತ್ ಎಂದು ಕರೆಯಲಾಗುತ್ತದೆ.  ಸಂಸತ್ತಿನ ಮುಂಗಾರು ಅಧಿವೇಶನ ಮುಗಿಯುವ ತನಕ ನಾವು ಜಂತರ್ ಮಂತರ್ ನಲ್ಲಿ ಉಳಿಯಲಿದ್ದೇವೆ'' ಎಂದು ಹೇಳಿದ್ದಾರೆ.

ಸಂಸತ್ತು ಭವನವು ಜಂತರ್ ಮಂತರ್ ನಿಂದ ಕೇವಲ 150 ಮೀಟರ್ ದೂರದಲ್ಲಿದೆ. ನಾವು ಅಲ್ಲಿ ನಮ್ಮದೇ ಸಂಸತ್ ಅಧಿವೇಶನಗಳನ್ನು ನಡೆಸುತ್ತೇವೆ. ಗೂಂಡಾಗಿರಿಯೊಂದಿಗೆ ನಾವು ಏನು ಮಾಡಬೇಕು? ನಾವು ದುಷ್ಕರ್ಮಿಗಳೇ "ಎಂದು ಜನವರಿ 26 ಕೆಂಪು ಕೋಟೆಯ ಹಿಂಸಾಚಾರದಂತಹ ಸಂದರ್ಭಗಳನ್ನು ನಿಭಾಯಿಸುವ ವ್ಯವಸ್ಥೆಗಳ ಬಗ್ಗೆ ಕೇಳಿದಾಗ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಮಾತುಕತೆಗೆ ಸಿದ್ಧ: "ನಾವು ರೈತರೊಂದಿಗೆ ಮಾತುಕತೆಗೆ ಸಿದ್ಧವಿದ್ದೇವೆ. ನಾವು ಈ ಹಿಂದೆಯೂ ಅವರೊಂದಿಗೆ ಮಾತನಾಡಿದ್ದೇವೆ. ಮೋದಿ ಸರಕಾರವು ರೈತರ ಸ್ನೇಹಿ ಸರಕಾರವಾಗಿದೆ'' ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಈ ಕೃಷಿ ಕಾನೂನುಗಳು ಪ್ರಯೋಜನಕಾರಿ ಮತ್ತು ರೈತರ ಪರವಾಗಿವೆ ಎಂದು ದೇಶವು ಸಾಕ್ಷಿಯಾಗಿದೆ. ಈ ಕಾನೂನುಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಅವರು ತಮ್ಮ ಸಮಸ್ಯೆಗಳನ್ನು ಕಾನೂನಿನ ಪ್ರಕಾರ ವ್ಯಕ್ತಪಡಿಸಿದರೆ, ನಾವು ಅದನ್ನು ಚರ್ಚಿಸಬಹುದು ಎಂದು ತೋಮರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News