ದೇಶದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳು ಸತತ ಎರಡನೇ ದಿನವೂ ಹೆಚ್ಚಳ

Update: 2021-07-22 06:39 GMT

ಹೊಸದಿಲ್ಲಿ: ದೈನಂದಿನ ಕೋವಿಡ್-19 ಕೊರೋನವೈರಸ್ ಸೋಂಕುಗಳು  41,383 ಏರಿಕೆಯಾಗಿದ್ದು, ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 3,12,57,720 ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳು ಸತತ ಎರಡನೇ ದಿನವೂ ಹೆಚ್ಚಳವನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

507 ಹೊಸ ಸಾವು-ನೋವುಗಳೊಂದಿಗೆ ದೇಶದ ಕೋವಿಡ್-19 ಸಾವಿನ ಸಂಖ್ಯೆ 4,18,987 ಕ್ಕೆ ಏರಿಕೆಯಾಗಿದೆ.

ರಾಷ್ಟ್ರೀಯ ಕೋವಿಡ್-19 ಚೇತರಿಕೆ ಪ್ರಮಾಣವು ಶೇಕಡಾ 97.35 ರಷ್ಟಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಅಂಕಿ-ಅಂಶದಿಂದ ತಿಳಿದುಬಂದಿದೆ.

ದೇಶದಲ್ಲಿ ಕೋವಿಡ್-19 ಪತ್ತೆಗಾಗಿ  ಬುಧವಾರ ಸುಮಾರು 17,18,439 ಪರೀಕ್ಷೆಗಳನ್ನು ನಡೆಸಲಾಯಿತು. ಇಲ್ಲಿಯವರೆಗೆ ಒಟ್ಟು 45,09,11,712 ಪರೀಕ್ಷೆ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News