ದಿಲ್ಲಿಯಲ್ಲಿ ಪ್ರಧಾನಿ ಸಮಯ ನೀಡಿದರೆ ಭೇಟಿಯಾಗುವೆ: ಮಮತಾ ಬ್ಯಾನರ್ಜಿ

Update: 2021-07-22 12:26 GMT

ಕೋಲ್ಕತಾ: "ನಾನು 2-3 ದಿನಗಳಲ್ಲಿ ದಿಲ್ಲಿಗೆ ಹೋಗುತ್ತೇನೆ. ಸಮಯ ಸಿಕ್ಕರೆ ನಾನು ರಾಷ್ಟ್ರಪತಿಯನ್ನು ಭೇಟಿಯಾಗುತ್ತೇನೆ. ಪ್ರಧಾನಿ ನನಗೆ ಸಮಯ ನೀಡಿದರೆ ಅವರನ್ನು ಭೇಟಿಯಾಗುತ್ತೇನೆ" ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪೆಗಾಸಸ್ ಸ್ನೂಪಿಂಗ್ ಹಗರಣ ದಿಂದ ಹಿಡಿದು ಐಟಿ ದಾಳಿಯ ತನಕ ಹಲವಾರು ವಿಷಯಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರಕಾರದ ವಿರುದ್ದ ಮಮತಾ ವಾಗ್ದಾಳಿ ನಡೆಸಿದ್ದರು.

ಮಮತಾ ಬ್ಯಾನರ್ಜಿ ಅವರ ದಿಲ್ಲಿ ಪ್ರವಾಸವು ಪಶ್ಚಿಮಬಂಗಾಳದಲ್ಲಿ ಬಿಜೆಪಿ ವಿರುದ್ಧ  ಇತ್ತೀಚಿನ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಪೆಗಾಸಸ್ ಸ್ನೂಪಿಂಗ್ ಹಗರಣವು 1972 ರಲ್ಲಿ ಅಮೆರಿಕದಲ್ಲಿ ನಡೆದ ವಾಟರ್ ಗೇಟ್ ಹಗರಣಕ್ಕಿಂತ ದೊಡ್ಡದಾಗಿದೆ ಹಾಗೂ  ಮಾಧ್ಯಮ ಸಂಸ್ಥೆಗಳ ಮೇಲೆ ಇತ್ತೀಚಿನ ತೆರಿಗೆ ಇಲಾಖೆಯ ದಾಳಿಗಳು ದೇಶದಲ್ಲಿ "ಸೂಪರ್-ತುರ್ತುಸ್ಥಿತಿ" ಯನ್ನು ಸೂಚಿಸುತ್ತದೆ ಎಂದು ಬ್ಯಾನರ್ಜಿ ಹೇಳಿದರು.

"ದೈನಿಕ್ ಭಾಸ್ಕರ್ ಸಮೂಹದ ಮಾಲೀಕರು ಹಾಗೂ  ಪತ್ರಕರ್ತರ ಮೇಲಿನ ದಾಳಿಯನ್ನು ನಾನು ಖಂಡಿಸುತ್ತೇನೆ. ಒಂದು ಕಡೆ ಐಟಿ ದಾಳಿಗಳು, ಮತ್ತೊಂದೆಡೆ ಪೆಗಾಸಸ್ ಹಗರಣ. ಇದು ಅಪಾಯಕಾರಿ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News