ಕೋವಿಡ್‍ನಿಂದ ಭಾರತದಲ್ಲಿ 1.19 ಲಕ್ಷ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ: ಲ್ಯಾನ್ಸೆಟ್ ವರದಿ

Update: 2021-07-22 13:34 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ 1.19 ಲಕ್ಷ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆಂದು ʼದಿ ಲ್ಯಾನ್ಸೆಟ್ʼ ಅಧ್ಯಯನ ವರದಿ ತಿಳಿಸಿದೆ. ಮೆಕ್ಸಿಕೋ ಮೊದಲ ಸ್ಥಾನದಲ್ಲಿದ್ದು ಅಲ್ಲಿನ 1.4 ಲಕ್ಷ ಮಕ್ಕಳು ತಮ್ಮ ಒಬ್ಬ ಹೆತ್ತವರನ್ನು ಕಳೆದುಕೊಂಡಿದ್ದರೆ ಎರಡನೇ ಸ್ಥಾನದಲ್ಲಿರುವ ಬ್ರೆಝಿಲ್‍ನಲ್ಲಿ ಈ ಸಂಖ್ಯೆ 1.3 ಲಕ್ಷ ಆಗಿದೆ.

ಜಾಗತಿಕವಾಗಿ ಮಾರ್ಚ್ 1, 2020ರಿಂದ ಎಪ್ರಿಲ್ 30, 2021ರ ತನಕ 11.34 ಲಕ್ಷ ಮಕ್ಕಳು ಕೋವಿಡ್‍ನಿಂದಾಗಿ ಅನಾಥರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಜಾಗತಿಕವಾಗಿ 15 ಲಕ್ಷಕ್ಕಿಂತ ಹೆಚ್ಚು ಮಕ್ಕಳು ತಮ್ಮ ಒಬ್ಬ ಪ್ರಾಥಮಿಕ ಆರೈಕೆದಾರ ಅಥವಾ ಜತೆಯಾಗಿ ವಾಸಿಸುವ ಅಜ್ಜ ಅಥವಾ ಅಜ್ಜಿಯನ್ನು ಕಳೆದುಕೊಂಡಿದ್ದಾರೆಂದು ವರದಿ ಹೇಳಿದೆಯಲ್ಲದೆ ಭಾರತದಲ್ಲಿ ಈ ಸಂಖ್ಯೆ 1.86 ಲಕ್ಷ ಆಗಿದೆ ಎಂದು ತಿಳಿಸಿದೆ.

ತಾಯಂದಿರಿಗಿಂತ ಹೆಚ್ಚಾಗಿ ತಂದೆಯನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ ಐದು ಪಟ್ಟು ಹೆಚ್ಚು. ಭಾರತದಲ್ಲಿ 25,500 ಮಕ್ಕಳು ತಮ್ಮ ತಾಯಿಯನ್ನು ಕಳೆದುಕೊಂಡಿದ್ದರೆ, 90,751 ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News